×
Ad

ಎಲ್ಲ ಜಾತಿ ಸಮುದಾಯಗಳ ನಡುವೆ ಕರಳು ಬಳ್ಳಿಯ ಸಂಬಂಧವಿದೆ: ವಕೀಲ ಶ್ರೀಧರ್ ಪ್ರಭು

Update: 2018-11-03 22:07 IST

ಬೆಂಗಳೂರು, ನ.3: ದೇಶದಲ್ಲಿರುವ ಎಲ್ಲ ಜಾತಿ, ಧರ್ಮಗಳ ಜನತೆಯ ನಡುವೆ ಕರುಳ ಬಳ್ಳಿಯ ಸಂಬಂಧವಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ನಂಬಿದ್ದರು ಎಂದು ವಕೀಲ ಶ್ರೀಧರ್ ಪ್ರಭು ತಿಳಿಸಿದರು.

ಶನಿವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮಹನೀಯರ ತತ್ವಗಳ ತೌಲನಿಕ ಅಧ್ಯಯನ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿಂದೂ, ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನ ಸೇರಿ ದೇಶದಲ್ಲಿರುವ ಎಲ್ಲ ಜಾತಿ-ಧರ್ಮದ ಜನತೆ ಇಲ್ಲೆ ಹುಟ್ಟಿ ಬೆಳೆದವರು. ಕಾಲಾನಂತರದಲ್ಲಿ ನಾನಾ ಕಾರಣಗಳಿಗಾಗಿ ಧರ್ಮಾಂತರಗೊಂಡಿದ್ದಾರೆ. ಎಲ್ಲರ ನಡುವೆಯು ಕರಳು ಬಳ್ಳಿಯ ಸಂಬಂಧವಿದೆ. ಆದರೆ, ಕೆಲವರು ಆರ್ಯ, ದ್ರಾವಿಡ, ಮುಸ್ಲಿಮ್, ಕ್ರೈಸ್ತ ಎಂದು ವಿಂಗಡಿಸಲು ತೊಡಗಿದ್ದಾರೆ ಎಂದು ಅವರು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂಸ್ಕೃತವನ್ನು ಅಧ್ಯಯನ ಮಾಡಿದ್ದ ಕಾರಣಕ್ಕಾಗಿಯೆ ಸಂಸತ್‌ನಲ್ಲಿ ಹಿಂದೂ ಮಸೂದೆಯನ್ನು ಮಂಡಿಸಲು ಸಾಧ್ಯವಾಯಿತು ಹಾಗೂ ಸಂಸ್ಕೃತ ಓದಿನ ಹಿನ್ನೆಲೆಯಲ್ಲಿಯೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಆದರೂ ಕೆಲವು ಅಂಬೇಡ್ಕರ್ ವಾದಿಗಳೆ ಸಂಸ್ಕೃತವನ್ನು ವಿರೋಧಿಸುತ್ತಿರುವುದು ಸರಿಯಲ್ಲವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News