ಕೆವೈಎನ್ ಕೃತಿಗೆ ಕಾವ್ಯಾನಂದ ಪುರಸ್ಕಾರ
Update: 2018-11-03 23:02 IST
ಬೆಂಗಳೂರು, ನ.3: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ಕೊಡಮಾಡುವ ಕಾವ್ಯಾನಂದ ಪುರಸ್ಕಾರ 2017ಕ್ಕೆ ಹಿರಿಯ ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಅವರ ’ಕೆವೈಎನ್ ಮೂರು ನಾಟಕಗಳು’ ಕೃತಿಗೆ ದೊರೆತಿದೆ.
ಡಾ.ಸಿದ್ದಯ್ಯ ಪುರಾಣಿಕ ಅವರ ಕಾವ್ಯನಾಮ ಕಾವ್ಯಾನಂದ ಹೆಸರಿನಲ್ಲಿ ಕೊಡಮಾಡುವ ಪುರಸ್ಕಾರವು 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿಫಲಕವನ್ನು ಒಳಗೊಂಡಿದೆ. ಡಿ.15ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜರುಗುವ ಸಮಾರಂಭದಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟಿನ ಅಧ್ಯಕ್ಷೆ ಜಯಾ ನಂದೀಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.