×
Ad

ನಾಡಿನ ಋಣ ತೀರಿಸಲು ಬದ್ಧರಾಗಬೇಕು: ಕಲಾವಿದ ನಾಗರಾಜಮೂರ್ತಿ

Update: 2018-11-04 22:23 IST

ಬೆಂಗಳೂರು, ನ. 4: ‘ನಾವು ಎಲ್ಲೇ ಇರಲಿ ಹೇಗೆ ಇರಲಿ, ನಾಡಿನ ಋಣ, ನೆಲ-ಜಲದ ಋಣ ತೀರಿಸಲು ಬದ್ದರಾಗಿರಬೇಕು. ನಾವು ಎಲ್ಲಿದ್ದೇವೂ ಅದೇ ನಮ್ಮ ಊರು ನಾಡು ಎಂದು ತಿಳಿದು ನಾಡಿನ ಸಂಸ್ಕೃತಿಯ ಪ್ರೀತಿಸಿ ಗೌರಸುವುದು ಮುಖ್ಯ’ ಎಂದು ಕಲಾವಿದ ನಾಗರಾಜಮೂರ್ತಿ ಹೇಳಿದ್ದಾರೆ.

ರವಿವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನಲ್ಲಿ ಕನ್ನಡಿಗರ ಸಂಖ್ಯೆ ಇಳಿಮುಖವಾಗುತ್ತಿದೆ. ಕನ್ನಡಭಾಷೆ ಅಳಿನಂಚಿನತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ ಬೆಳಸುವಂತಹ ಪ್ರಯತ್ನವನ್ನು ಅನ್ಯಭಾಷೆಯ ಜನರು ಮಾಡುತ್ತಿದ್ದರೆ ಇದು ನಿಜಕ್ಕೂ ಶ್ಲಾಘನೀಯ ಎಂದರು.

ಭಾಷೆಯ ಮಹತ್ವವಿದೆ, ಹೀಗಾಗಿ ಪ್ರತಿಯೊಬ್ಬರು ಕನ್ನಡವನ್ನು ಕಲಿಯುವ ಪ್ರಯತ್ನ ಮಾಡಬೇಕು. ಕನ್ನಡದಲ್ಲೇ ವ್ಯವಹರಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕು ಎಂದು ನಾಗರಾಜಮೂರ್ತಿ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ರೆ.ಫಾ.ಡಾ.ಸಾಬುಜಾರ್ಜ್, ಕನ್ನಡ ಸಾಹಿತ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡವನ್ನು ಆಭಿವೃದ್ಧಿಪಡಿಸುವುರೊಂದಿಗೆ ಸರಕಾರ ತನ್ನ ಆಡಳಿತದಲ್ಲೇ ಕನ್ನಡ ಭಾಷೆಯನ್ನು ಎಲ್ಲ ಹಂತದಲ್ಲಿಯೂ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News