ಮೆಟ್ರೋದಲ್ಲಿ ಹಿಂದಿ ಫಲಕಗಳ ಶಾಶ್ವತ ತೆರವಿಗೆ ಆಗ್ರಹ

Update: 2018-11-04 17:04 GMT

ಬೆಂಗಳೂರು, ನ.4: ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲು ಬಿಎಂಆರ್‌ಸಿಎಲ್‌ಗೆ ಸ್ಪಷ್ಟ ಸೂಚನೆ ನೀಡಿದ್ದರಿಂದ ವಿವಿಧ ನಿಲ್ದಾಣಗಳಲ್ಲಿ ಅಂಟಿಸಿದ್ದ ಸ್ಟಿಕ್ಕರ್‌ಗಳು ಹರಿದುಹೋಗಿದ್ದು, ಮತ್ತೆ ಹಿಂದಿ ಭಾಷೆ ಇಣುಕಿ ನೋಡುತ್ತಿದೆ.

ಹಿಂದಿನ ಸರಕಾರ ಹಿಂದಿಯನ್ನು ತೆರವು ಮಾಡಬೇಕು ಎಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಲ್ಲ ನಿಲ್ದಾಣಗಳಲ್ಲಿ ಹಿಂದಿ ಫಲಕಗಳ ಮೇಲೆ ಕನ್ನಡದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು. ಆದರೆ, ಇದೀಗ ಅವುಗಳು ಹರಿದು, ಅದರೊಳಗಿಂದ ಮತ್ತೆ ಹಿಂದಿ ಇಣುಕುತ್ತಿದೆ. ಎಲ್ಲ ಕಡೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದರೂ, ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿಯಿಂದ ಮುಕ್ತಿ ಸಿಕ್ಕಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪರ ಸಂಘಟನೆಗಳ ಹೋರಾಟ, ಬಿಎಂಆರ್‌ಸಿಎಲ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಖಡಕ್ ಎಚ್ಚರಿಕೆ ಹಾಗೂ ಹೋರಾಟದಿಂದಾಗಿ ಹಿಂದಿನ ಸರಕಾರ ಸ್ಪಂದಿಸಿ ಹಿಂದಿ ಹಾವಳಿಯಿಂದ ಮುಕ್ತಿ ನೀಡಿತ್ತು. ಆದರೆ, ಹೊಸ ಸರಕಾರ ಅಧಿಕಾರ ಹಿಡಿಯುತ್ತಿದ್ದಂತೆಯೇ ಜಯನಗರ, ಶ್ರೀರಾಮಪುರ ಸೇರಿದಂತೆ ಕೆಲವು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಹಿಂದಿ ಕಾಣಸಿಗುತ್ತದೆ. ಸ್ಟಿಕ್ಕರ್‌ಗಳು ಹರಿದುಹೋಗಿವೆ. ಇದರಿಂದಾಗಿ, ಶಾಶ್ವತವಾಗಿ ಫಲಕಗಳನ್ನು ತೆರವು ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News