×
Ad

ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವು: ಶ್ರೀರಾಮುಲು 'ಅಣ್ಣ'ನಿಗೆ ಧನ್ಯವಾದ- ಸಚಿವ ಡಿ.ಕೆ.ಶಿವಕುಮಾರ್

Update: 2018-11-06 12:27 IST

ಬೆಂಗಳೂರು, ನ.6: ಯಾವುದೇ ಚುನಾವಣೆಯಲ್ಲಿ ಗೆಲುವು-ಸೋಲು ಸಾಮಾನ್ಯ. ಆದರೆ, ಚುನಾವಣೆ ವೇಳೆ ಯಾವುದೇ ಸಣ್ಣ ಘರ್ಷಣೆ ಉಂಟಾಗದಂತೆ ನೋಡಿಕೊಂಡ ಶ್ರೀರಾಮುಲು ಅಣ್ಣನಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಗೆಲುವನ್ನು ಉದ್ದೇಶಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶ್ರೀರಾಮುಲು ಒಬ್ಬ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ. 1999ರಲ್ಲಿ ಅವರು ಕಾರ್ಪೊರೇಟರ್​ ಆಗಿದ್ದಾಗ, ನಾನು ಅಲ್ಲಿಗೆ ಹೋಗಿದ್ದೆ. ಆಗ ಅವರು ಸೈಕಲ್​ನಲ್ಲಿ ಕಾಂಗ್ರೆಸ್​ ಬಾವುಟ ಕಟ್ಟಿಕೊಂಡು, ಪ್ರಚಾರ ಕಾರ್ಯ ನಡೆಸಿದ್ದರು. ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು  ಹೇಳಿದರು.

ಬಳ್ಳಾರಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ನಾವು ಕೇವಲ ಐದು ತಿಂಗಳಿಗೆ ಮತ ಕೇಳಲಿಲ್ಲ. ಬದಲಿಗೆ ಐದು ವರ್ಷ ಐದು ತಿಂಗಳಿಗೆ ಅವರಲ್ಲಿ ಮತ ಕೇಳಿದ್ದೇವು. ಜನ ನಮ್ಮನ್ನು ಆಶೀರ್ವದಿಸಿದ್ದಾರೆ. ಬಳ್ಳಾರಿ ಅಭಿವೃದ್ಧಿ ವಿಚಾರದಲ್ಲಿ ದೊಡ್ಡ ಸವಾಲುಗಳು ಇವೆ . 371 ಜೆ ಸೌಲಭ್ಯ ಸಮರ್ಪಕ ಬಳಕೆ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News