ಬಿಎಂಟಿಸಿ ಅಂತರ ನಿಗಮ ವರ್ಗಾವಣೆಗೆ ಚಾಲನೆ

Update: 2018-11-07 12:47 GMT

ಬೆಂಗಳೂರು, ನ.7: ಹಲವು ವರ್ಷಗಳಿಂದ ಹಿಂದೆ ಬಿದ್ದಿದ್ದ ಬಿಎಂಟಿಸಿ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ನೌಕರರಿಗೆ ದೀಪಾವಳಿ ಸಿಹಿ ಸಿಕ್ಕಿದಂತಾಗಿದೆ.

ಬಿಎಂಟಿಸಿಯಲ್ಲಿನ 2,237 ಸಿಬ್ಬಂದಿ ಅಂತರ ನಿಗಮ ವರ್ಗಾವಣೆಗೆ ಕಾಯುತ್ತಿದ್ದು, ಮೊದಲ ಹಂತವಾಗಿ 375 ಸಿಬ್ಬಂದಿಯನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಉಳಿದವರನ್ನು ಹಂತ ಹಂತವಾಗಿ ವರ್ಗಾವಣೆ ಮಾಡಲು ನಿಗಮ ನಿರ್ಧರಿಸಿದೆ.

ಬಿಎಂಟಿಸಿಯಲ್ಲಿ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿರುವ ಎಲ್ಲರನ್ನೂ ಒಂದೇ ಬಾರಿಗೆ ವರ್ಗಾವಣೆ ಮಾಡಿದರೆ ಸಿಬ್ಬಂದಿ ಕೊರತೆ ಕಾಡುತ್ತದೆ ಎಂಬ ಉದ್ದೇಶದಿಂದ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದ ನಂತರ ಹಂತ ಹಂತವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಿಎಂಟಿಸಿಯು ಮೊದಲ ಹಂತದಲ್ಲಿ 100 ಚಾಲಕ, 100 ತಾಂತ್ರಿಕ ಸಹಾಯಕರು, 99 ಚಾಲಕ ಕಂ ನಿರ್ವಾಹಕ ಹಾಗೂ 76 ನಿರ್ವಾಹಕರನ್ನು ತಾವು ಕೋರಿದ್ದ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News