ಇಂದಿನಿಂದ ವನಿತೆಯರ ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ-ಕಿವೀಸ್ ಮೊದಲ ಎದುರಾಳಿ

Update: 2018-11-08 18:37 GMT

ಗಯಾನ, ನ.8: ವನಿತೆಯರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿ ವೆಸ್ಟ್ ಇಂಡೀಸ್‌ನಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ.

ಒಟ್ಟು 10 ತಂಡಗಳು ಭಾಗವಹಿಸಲಿವೆ. ಎ’ ಗುಂಪಿನಲ್ಲಿ ದಕ್ಷಿಣ ಆಫ್ರಿಕ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ , ಬಿ’ ಗುಂಪಿನಲ್ಲಿ ಐರ್ಲೆಂಡ್ , ಆಸ್ಟ್ರೇಲಿಯ, ನ್ಯೂಝಿಲೆಂಡ್, ಪಾಕಿಸ್ತಾನ ಮತ್ತು ಭಾರತ ತಂಡ ಮುಂದಿನ ಹಂತಕ್ಕೇರಲು ಹಣಾಹಣಿ ನಡೆಸಲಿವೆ.

16 ದಿನಗಳ ನಡೆಯಲಿರುವ ಈ ಟೂರ್ನಮೆಂಟ್‌ನ ಫೈನಲ್ ಪಂದ್ಯ ನ.24ರಂದು ಅಂಟಿಗುವಾದಲ್ಲಿ ನಡೆಯಲಿದೆ. ಭಾರತ ಈ ವರೆಗೆ ಟ್ವೆಂಟಿ-20 ಮಹಿಳಾ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿಲ್ಲ. 2010ರಲ್ಲಿ ಸೆಮಿಫೈನಲ್ ತಲುಪಿರುವುದು ತಂಡದ ದೊಡ್ಡ ಸಾಧನೆಯಾಗಿದೆ.

ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳಾ ತಂಡ ನ್ಯೂಝಿಲೆಂಡ್‌ನ್ನು ಎದುರಿಸಲಿದೆ. ಪಂದ್ಯ ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಆರಂಭಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News