ಬಿಎಂಟಿಸಿ ಚಾಲಕರಿಗೆ ಕರ್ತವ್ಯದ ವೇಳೆ ಮೊಬೈಲ್ ನಿರ್ಭಂದ

Update: 2018-11-10 16:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.10: ಬಿಎಂಟಿಸಿ ಬಸ್ ಚಾಲಕರು ಕರ್ತವ್ಯದ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವುದು ಅಥವಾ ತಮ್ಮ ಬಳಿ ಇಟ್ಟುಕೊಳ್ಳುವುದನ್ನು ನಿರ್ಭಂದಿಸಲಾಗಿದೆ.

ಬಸ್ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಮಾತನಾಡುವುದು ಅಥವಾ ಬಳಕೆ ಮಾಡುವುದು ಅಪಾಯಕಾರಿ. ಈ ಸಂಬಂಧ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದ್ದು, ನ.15 ರಿಂದ ಈ ನಿರ್ಭಂದ ಅನ್ವಯವಾಗಲಿದೆ. ಒಂದು ವೇಳೆ ಮೊಬೈಲ್ ಬಳಕೆ ಕಂಡುಬಂದರೆ ಸೇವೆಯಿಂದ ಅಮಾನತು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನುಳಿದಂತೆ ನಿರ್ವಾಹಕರು ತಮ್ಮ ಬಳಿ ಮೊಬೈಲ್ ಇಟ್ಟುಕೊಂಡರೂ, ಬಳಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News