ತಂದೆ, ಅಜ್ಜನಿಂದ ಬಳುವಳಿಯಾಗಿ ಬಂದ ಕೌಟುಂಬಿಕ ಮೌಲ್ಯಗಳು ನನಗೆ ಆದರ್ಶ: ಡಾ. ತುಂಬೆ ಮೊಹಿದಿನ್

Update: 2018-11-11 17:25 GMT

ದುಬೈ, ನ.11: ದುಬೈಯ ಔದ್ ಮೆಹ್ತಾದಲ್ಲಿರುವ ಸೇಂಟ್ ಥೋಮಸ್ ಓರ್ಥೊಡಾಕ್ಸ್ ಚರ್ಚ್‌ನಲ್ಲಿ ಶುಕ್ರವಾರ ನಡೆದ ಕುಟುಂಬ ಸ್ನೇಹಮಿಲನ ಮತ್ತು ತೆನೆಹಬ್ಬ ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಹಿದಿನ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ತಮ್ಮ ಭಾಷಣದಲ್ಲಿ ಕೌಟುಂಬಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದ ಅವರು, ತನ್ನ ತಂದೆ ಹಾಗೂ ಅಜ್ಜನಿಂದ ಪಡೆದಂಥ ಮೌಲ್ಯಗಳಿಂದ ಇಂದು ತಾನು ಇಷ್ಟು ಯಶಸ್ವಿ ಉದ್ಯಮಿಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಚರ್ಚ್‌ನ 50ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಡಾ. ತುಂಬೆ ಮೊಹಿದಿನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಬ್ದುಲ್ಲಾ ಅಲ್ ಸುವೈದಿ, ಫಾ. ನಿನನ್ ಫಿಲಿಪ್, ಡಾ. ಯೋಹನನ್ ಮರ್ ಡೆಮೆಟ್ರಿಯಸ್ ಹಾಗೂ ಇತರರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.

ತನ್ನ ತಂದೆ ಮತ್ತು ಅಜ್ಜನಿಂದ ಬಳುವಳಿಯಾಗಿ ಬಂದಂಥ ಕೌಟುಂಬಿಕ ಮೌಲ್ಯಗಳು ಯಾವ ರೀತಿ ಈಗಲೂ ತನಗೆ ಮಾರ್ಗದರ್ಶನ ನೀಡುತ್ತಿದೆ ಎಂಬುದನ್ನು ಡಾ. ತುಂಬೆ ಮೊಹಿದಿನ್ ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡರು. ಈ ಸಂದರ್ಭದಲ್ಲಿ ಚರ್ಚ್‌ನ ಆಡಳಿತ ಮಂಡಳಿ ಡಾ. ತುಂಬೆ ಮೊಹಿದಿನ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News