ಅಜ್ಮಾನ್: 25ನೇ ವರ್ಷದ ಸಂಭ್ರಮದಲ್ಲಿ 'ಮೊಹಿದಿನ್ ವುಡ್ ವರ್ಕ್ಸ್‌'

Update: 2018-11-11 17:53 GMT

ಅಜ್ಮಾನ್, ನ.11: ಮಧ್ಯಪ್ರಾಚ್ಯದ ಅತ್ಯಂತ ಹಳೆಯ ಕಟ್ಟಿಗೆ ಕಾರ್ಖಾನೆಗಳಲ್ಲಿ ಒಂದಾಗಿರುವ 'ಮೊಹಿದಿನ್ ವುಡ್ ವರ್ಕ್ಸ್' ಈ ವರ್ಷ 25ನೇ ವರ್ಷವನ್ನು ಆಚರಿಸುತ್ತಿದೆ.

1993ರಲ್ಲಿ ಸ್ಥಾಪಿಸಲ್ಪಟ್ಟ ಈ ಕಾರ್ಖಾನೆ ಇದೀಗ ಮರದ ದಿಮ್ಮಿಗಳನ್ನು ಆಮದು ಮಾಡಿಕೊಳ್ಳುವ ಪ್ರಮುಖ ಕಾರ್ಖಾನೆಗಳಲ್ಲಿ ಒಂದಾಗಿ ಬೆಳೆದಿರುವುದು ಸಂಸ್ಥೆಯ ಯಶೋಗಾಥೆಗೆ ಹಿಡಿದ ಕನ್ನಡಿಯಾಗಿದೆ. ಮೊಹಿದಿನ್ ವುಡ್ ವರ್ಕ್ಸ್‌ನ ಸ್ಥಾಪಕ ಮತ್ತು ವ್ಯವಸ್ಥಾಪನಾ ನಿರ್ದೇಶಕ ಬಿ.ಎಂ.ಅಶ್ರಫ್ ಹೇಳುವಂತೆ, ಸಂಸ್ಥೆ ಇಷ್ಟೊಂದು ಅಗಾಧವಾಗಿ ಮತ್ತು ಯಶಸ್ವಿಯಾಗಿ ಬೆಳೆಯಲು ಮುಖ್ಯ ಕಾರಣ ಕೆಲಸಗಳನ್ನು ವಿಭಿನ್ನವಾಗಿ ಮಾಡಬೇಕೆಂಬ ತುಡಿತ. 1993ರಲ್ಲಿ ಮರುಭೂಮಿಯ ಮಧ್ಯೆ ಕಟ್ಟಿಗೆ ಕಾರ್ಖಾನೆಯನ್ನು ಆರಂಭಿಸಿದಾಗ ಎಲ್ಲರೂ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು. ಆದರೆ ನಾವು ಯಾವುದನ್ನೂ ಲೆಕ್ಕಿಸದೆ ನಮ್ಮ ಕೆಲಸವನ್ನು ಮಾಡಿ ವರ್ಷಗಳು ಕಳೆದಂತೆ ಒಂದರ ಹಿಂದೆ ಒಂದರಂತೆ ಮೈಲಿಗಲ್ಲುಗಳನ್ನು ದಾಟುತ್ತಲೇ ಮುನ್ನಡೆದೆವು. ಯಶಸ್ವಿಯ ರುಚಿ ಸವಿದಿರುವ ನಾವೂ ಸದ್ಯ ಈ ಹಂತಕ್ಕೆ ತಲುಪಿದ್ದೇವೆ ಎಂದು ಹೇಳುತ್ತಾರೆ.

80ರ ದಶಕದಲ್ಲಿ ಕಟ್ಟಿಗೆ ಪಡೆಯುವ ಸಲುವಾಗಿ ಜಗತ್ತಿನಾದ್ಯಂತ ತಿರುಗಾಡಿದ ಅಶ್ರಫ್‌ಗೆ ಆ ಮೂಲಕ ಪ್ರಪಂಚದೆಲ್ಲೆಡೆಯಿಂದ ಅಸಂಖ್ಯಾತ ಪೂರೈಕೆ ಸರಪಳಿಗಳನ್ನು ಸೃಷ್ಟಿಸಲು ಸಹಾಯವಾಯಿತು. ಜೊತೆಗೆ ವಿವಿಧ ಕಟ್ಟಿಗೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಲು ಮತ್ತು ಅವುಗಳ ಬಳಕೆಯ ಬಗ್ಗೆ ಅರಿಯಲು ಸಾಧ್ಯವಾಯಿತು.

ಮೊಹಿದಿನ್ ವುಡ್ ವರ್ಕ್ಸ್‌ ಅನ್ನು ಎಚ್.ಇ. ಶೇಕ್, ಡಾ. ಮಜಿದ್ ಬಿನ್ ಸಯೀದ್ ಅಲ್ ನವುಮಿ, ಅಜ್ಮಾನ್‌ನ ಆಡಳಿತ ಕುಟುಂಬದ ಸದಸ್ಯರು ಮತ್ತು ರೂಲರ್ಸ್ ಕೋರ್ಟ್‌ನ ಮುಖ್ಯಸ್ಥರು ಪೋಷಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News