ಎರಡನೇ ಟೆಸ್ಟ್: ಬಾಂಗ್ಲಾದೇಶ 303/5

Update: 2018-11-11 18:25 GMT

ಢಾಕಾ, ನ.11: ಝಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಆತಿಥೇಯ ಬಾಂಗ್ಲಾದೇಶ 5 ವಿಕೆಟ್‌ಗಳ ನಷ್ಟಕ್ಕೆ 303 ರನ್ ಗಳಿಸಿದೆ.

ರವಿವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಬಾಂಗ್ಲಾದೇಶ 26 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ತಂಡಕ್ಕೆ ಆಸರೆಯಾಗಿ ನಿಂತ ಮೊಮಿನುಲ್ ಹಕ್(161)ಹಾಗೂ ಮುಶ್ಫಿಕುರ್ರಹೀಂ (111) 4ನೇ ವಿಕೆಟ್‌ಗೆ 266 ರನ್ ಜೊತೆಯಾಟ ನಡೆಸಿ ಮೊದಲ ದಿನದಾಟದಲ್ಲಿ ಬಾಂಗ್ಲಾ ಉತ್ತಮ ಸ್ಕೋರ್ ಗಳಿಸಲು ನೆರವಾದರು.

 7ನೇ ಶತಕ ಸಿಡಿಸಿದ ಹಕ್ 247 ಎಸೆತಗಳನ್ನು ಎದುರಿಸಿ 19 ಬೌಂಡರಿಗಳ ನೆರವಿನಿಂದ 161 ರನ್ ಗಳಿಸಿದರು. 6ನೇ ಶತಕ ಸಿಡಿಸಿದ (ಔಟಾಗದೆ 111) ಮುಶ್ಫಿಕುರ್ರಹೀಂ 231 ಎಸೆತಗಳಲ್ಲಿ 9 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ಜೋಡಿಯನ್ನು ಚಟರ ಬೇರ್ಪಡಿಸಿದರು.

 ಮೊಮಿನುಲ್ ಹಕ್ ಹಾಗೂ ಮುಶ್ಫಿಕುರ್ರಹೀಂ ಬಾಂಗ್ಲಾ ಪರ 4ನೇ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದರು. ಈ ವರ್ಷಾರಂಭದಲ್ಲಿ ಶ್ರೀಲಂಕಾ ವಿರುದ್ಧ ಮೊಮಿನುಲ್ ಹಾಗೂ ಲಿಟನ್ ದಾಸ್ 4ನೇ ವಿಕೆಟ್‌ಗೆ 180 ರನ್ ಜೊತೆಯಾಟ ನಡೆಸಿದ್ದರು. ಈ ದಾಖಲೆಯನ್ನು ಮೊಮಿನುಲ್-ರಹೀಂ ಮುರಿದರು. ಝಿಂಬಾಬ್ವೆ ಪರ ಕೈಲ್ ಜಾರ್ವಿಸ್ 48 ರನ್‌ಗೆ 3 ವಿಕೆಟ್‌ಗಳನ್ನು ಉರುಳಿಸಿದರು.

ಮೊದಲ ಟೆಸ್ಟ್ ಪಂದ್ಯ ವನ್ನು 151 ರನ್‌ಗಳಿಂದ ಗೆದ್ದುಕೊಂಡಿರುವ ಝಿಂಬಾಬ್ವೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News