ಎಬಿವಿಪಿಯಿಂದ ಕೇಂದ್ರ ಸಚಿವ ಸ್ಥಾನದವರೆಗೆ ಅನಂತ್ ಕುಮಾರ್ ಸಾಗಿ ಬಂದ ಹಾದಿ

Update: 2018-11-12 13:52 GMT

ಬೆಂಗಳೂರು, ನ.12: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ನಾಯಕರಾಗಿರುವ ಎಚ್.ಎನ್.ಅನಂತ್ ಕುಮಾರ್, ವಿದ್ಯಾರ್ಥಿ ದೆಸೆಯಲ್ಲಿ ಎಬಿವಿಪಿ ಕಾರ್ಯದರ್ಶಿಯ ಹುದ್ದೆಯಿಂದ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಸ್ಥಾನದವರೆಗಿನ ಹಾದಿಯನ್ನು ಕ್ರಮಿಸಿದ್ದರು.

1982-85: ಎಬಿವಿಪಿ ರಾಜ್ಯ ಘಟಕದ ಕಾರ್ಯದರ್ಶಿ

1985-87: ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ

1987-88: ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ

1988-95: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

1995- 98: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ

1996: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೆತ್ರದಿಂದ ಮೊದಲ ಬಾರಿಗೆ ಆಯ್ಕೆ

1996-97: ಕೈಗಾರಿಕಾ ಸಲಹಾ ಸಮಿತಿ ಹಾಗೂ ರೈಲ್ವೆ ಸ್ಥಾಯಿ ಸಮಿತಿ ಸದಸ್ಯ

1998: ಲೋಕಸಭೆಗೆ ಎರಡನೇ ಬಾರಿಗೆ ಪುನರಾಯ್ಕೆ

1998-1999: ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ

1999: ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಹೊಣೆ

1999: ಮೂರನೇ ಬಾರಿಗೆ ಸಂಸದರಾಗಿ ಆಯ್ಕೆ

1999-2000: ಕೇಂದ್ರ ಸಂಸ್ಕೃತಿ ಹಾಗೂ ಯುವ ಜನಸೇವಾ ಸಚಿವ

2000: ಸಂಸ್ಕೃತಿ ಇಲಾಖೆ ಜತೆಗೆ ಪ್ರವಾಸೋದ್ಯಮ

2000: ನಗರಾಭಿವೃದ್ಧಿ, ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿ ಇಲಾಖೆ

2003: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ

2004: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ 4ನೇ ಬಾರಿಗೆ ಆಯ್ಕೆ

2004-08: ಸಂಸತ್ತಿನ ಉಕ್ಕು ಸಮಿತಿ ಅಧ್ಯಕ್ಷ

2004: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

2005: ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿ ಸದಸ್ಯ

2007: ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಕಲಾಪ ಸಲಹಾ ಸಮಿತಿ ಸದಸ್ಯ

2009: ಐದನೇ ಬಾರಿಗೆ ಸಂಸದರಾಗಿ ಆಯ್ಕೆ

2009: ರಸಗೊಬ್ಬರ ಹಾಗೂ ಔಷಧ ಸ್ಥಾಯಿ ಸಮಿತಿ ಅಧ್ಯಕ್ಷ

2009: ಹಕ್ಕು ಭಾದ್ಯತೆ ಮತ್ತು ಕಾಯ್ದೆ ಸಮಿತಿ ಸದಸ್ಯ

2010: ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ

2014: ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷಧ ಇಲಾಖೆ ಸಚಿವ ಹಾಗೂ 2016 ರಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಇಲಾಖೆ ಹೆಚ್ಚುವರಿ ಹೊಣೆಯನ್ನು ಅನಂತ್ ಕುಮಾರ್ ನಿಭಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News