ರಾಜ್ಯ ರಾಜಧಾನಿಯಲ್ಲಿ ಹೆಚ್ಚುತ್ತಿದೆ ಚಳಿ

Update: 2018-11-12 15:50 GMT

ಬೆಂಗಳೂರು, ನ.12: ರಾಜ್ಯ ರಾಜಧಾನಿಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 286 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಅಕ್ಟೋಬರ್‌ನಿಂದ ನ.10ರವರೆಗೆ 88.6 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷದಂತೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಮಳೆ ಬಾರದೆ ಹವಾಮಾನ ಬದಲಾಗಿ ಚಳಿ ಹೆಚ್ಚುತ್ತಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಈ ಬಾರಿ ನಿರೀಕ್ಷೆಯಂತೆ ಹಿಂಗಾರು ಮಳೆಯಾಗುತ್ತಿಲ್ಲ. ನಗರದಲ್ಲಿ ತಂಪು ಗಾಳಿ ಬೀಸುವುದರೊಂದಿಗೆ ಚಳಿ ಹೆಚ್ಚುತ್ತಿದೆ. ಶುಭ್ರ ಆಕಾಶವಿರುವುದರಿಂದ ತಂಪು ಗಾಳಿ ಬೀಸುತ್ತಾ ಚಳಿ ಹೆಚ್ಚುತ್ತಿದೆ. ಹಗಲಿನಲ್ಲಿ ತಾಪಮಾನ ಹೆಚ್ಚಿದ್ದು, ಸಂಜೆಯಷ್ಟರಲ್ಲಿ ಇಳಿಕೆಯಾಗುತ್ತಿದೆ. ಅಂಡಮಾನ್ ನಿಕೋಬಾರ್ ಬಳಿ ವಾಯುಭಾರ ಕುಸಿತವಾಗಿದ್ದು, ಇದು ಕ್ರಮೇಣ ಚಂಡಮಾರುತವಾಗಿ ಬದಲಾಗಿದ್ದು, ನ.15, 16 ಹಾಗೂ 17ರಂದು ನಗರದಲ್ಲಿ ಸ್ವಲ್ಪ ಮಳೆ ಬರಬಹುದು. ಮೋಡ ಕವಿದರೆ ಚಳಿ ಕಡಿಮೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News