ರಫೇಲ್ ಒಪ್ಪಂದದಲ್ಲಿ ಅಂಬಾನಿಯನ್ನು ಆಯ್ಕೆ ಮಾಡಿದ್ದು ನಾವೇ: ಡಸಾಲ್ಟ್ ಸಿಇಒ

Update: 2018-11-13 06:50 GMT

ಹೊಸದಿಲ್ಲಿ, ನ.13: ಚುನಾವಣಾ ವರ್ಷದಲ್ಲಿ ರಫೇಲ್ ಜೆಟ್ ಒಪ್ಪಂದ ರಾಜಕೀಯ ವಿವಾದವನ್ನು ಸೃಷ್ಟಿಸಿದ್ದು, ಒಪ್ಪಂದದ ಬಗ್ಗೆ ರಾಹುಲ್ ಗಾಂಧಿಯ ಆರೋಪಕ್ಕೆ ಕೊನೆಗೂ ಮೌನ ಮುರಿದಿರುವ ಫ್ರಾನ್ಸ್‌ನ ಜೆಟ್ ನಿರ್ಮಾಣ ಕಂಪೆನಿ ಡಸಾಲ್ಟ್ ಸಿಇಒ, ರಫೇಲ್ ಒಪ್ಪಂದದಲ್ಲಿ ಅಂಬಾನಿಯವರನ್ನು ಸ್ವತಃ ನಾವೇ ಆಯ್ಕೆ ಮಾಡಿದ್ದು, ಈ ವಿಚಾರದಲ್ಲಿ ನಾವು ಸುಳ್ಳು ಹೇಳುತ್ತಿಲ್ಲ ಎಂದಿದ್ದಾರೆ.

‘‘ನಾವು ಸ್ವಯಂಪ್ರೇರಿತರಾಗಿ ಅಂಬಾನಿ ಕಂಪೆನಿಯನ್ನು ರಫೇಲ್ ಜೆಟ್ ಒಪ್ಪಂದಕ್ಕೆ ಆಯ್ಕೆ ಮಾಡಿದ್ದೆವು. ನಮ್ಮ ಬಳಿ ರಿಲಯನ್ಸ್ ಅಲ್ಲದೆ 30 ಪಾಲುದಾರರಿದ್ದಾರೆ. ಹೇಳಿಕೆ ನೀಡುವ ಮೊದಲು ನಾನು ಮಾಡಿರುವ ಘೋಷಣೆಯಲ್ಲಿ ಸತ್ಯಾಂಶವಿದೆ. ಕಂಪೆನಿಯ ಸಿಇಒ ಆಗಿ ನಾನು ಸುಳ್ಳು ಹೇಳುವುದಿಲ್ಲ’’ ಎಂದು ಡಸಾಲ್ಟ್ ಸಿಇಒ ಎರಿಕ್ ಟ್ರ್ಯಾಪಿಯರ್ ಹೇಳಿದ್ದಾರೆ.

ಫ್ರಾನ್ಸ್‌ನ ಡಸಾಲ್ಟ್ ಕಂಪೆನಿಯು 36 ರಫೇಲ್ ಯುದ್ದ ವಿಮಾನ ತಯಾರಿಕೆಗೆ ಭಾರತದೊಂದಿಗೆ 59,000 ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದು ವಿಮಾನ ತಯಾರಿಕೆಯಲ್ಲಿ ಅನುಭವವಿಲ್ಲದ ಅನಿಲ್ ಅಂಬಾನಿ ಮಾಲಕತ್ವದ ರಿಲಯನ್ಸ್ ಡಿಫೆನ್ಸ್‌ನ್ನು ಫ್ರಾನ್ಸ್ ಕಂಪೆನಿಯು ತನ್ನ ಪಾಲುದಾರರನ್ನಾಗಿ ಮಾಡಿಕೊಂಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News