ಕೇಂದ್ರದಲ್ಲಿ ಕನ್ನಡದ ಕೆಲಸ ಮಾಡಿಸಿಕೊಡುತ್ತಿದ್ದ ಅನಂತ್ ಕುಮಾರ್: ಎಸ್.ಜಿ.ಸಿದ್ದರಾಮಯ್ಯ

Update: 2018-11-13 14:27 GMT

ಬೆಂಗಳೂರು, ನ.13: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದಿಂದ ಕೇಂದ್ರ ಸರಕಾರದೊಂದಿಗಿನ ಕೊಂಡಿಯೊಂದು ಕಳಚಿದ್ದು, ಇದು ಭಾಷೆಯ ಹಿತದೃಷ್ಟಿಯಿಂದ ತುಂಬಲಾರದ ನಷ್ಟ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇಂದ್ರ ಸರಕಾರದಲ್ಲಿ ಕನ್ನಡ ಕೆಲಸವಾಗಬೇಕಾದರೆ ಅನಂತ್ ಕುಮಾರದ ಅವರನ್ನು ಕೇಳಿದರೆ ಸಾಕು ಎನ್ನುವ ಮಟ್ಟಿಗಿನ ಕನ್ನಡದ ಕಾಳಜಿಯು ಅವರದ್ದಾಗಿತ್ತು. ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನ ಹಾಗೂ ಕೇಂದ್ರ ಸರಕಾರ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಸಿಗಬೇಕಿದ್ದ ಪ್ರಾತಿನಿಧ್ಯ ನೀಡುತ್ತಿದ್ದರು ಎಂದು ಹೇಳಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ನಿಯೋಗ ಪ್ರತಿ ಬಾರಿ ದೆಹಲಿಗೆ ಭೇಟಿ ನೀಡಿದಾಗಲೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿಸಿ ಸಮಸ್ಯಗೆ ತಾರ್ಕಿಕ ಅಂತ್ಯವನ್ನು ಕಾಣಿಸಲು ಅವರು ಶ್ರಮಿಸುತ್ತಿದ್ದರು. ಅವರ ಬದ್ಧತೆ ಬೇರೆಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾಗಿ ಉಳಿಯುತ್ತದೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News