×
Ad

ಬೆಂಗಳೂರು: ವಿಶ್ವದಲ್ಲೇ ಪ್ರಥಮ ಬಾರಿಗೆ 8 ತಿಂಗಳ ಎಳೆಗೂಸಿಗೆ ಎಎಡಿ ಶಸ್ತ್ರಚಿಕಿತ್ಸೆ

Update: 2018-11-13 20:21 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 13: ವಿಶ್ವದಲ್ಲೇ ಮೊದಲ ಬಾರಿಗೆ ಎಂಟು ತಿಂಗಳಿನ ಎಳೆಗೂಸಿಗೆ ಅಟ್ಲಾಂಟೊ-ಆಕ್ಸಿಯಲ್ ಡಿಸ್ಲೊಕೇಷನ್(ಎಎಡಿ) ಶಸ್ತ್ರಚಿಕಿತ್ಸೆಯನ್ನು ನಗರದ ಸಾಗರ್ ಆಸ್ಪತ್ರೆ ಮಾಡಿರುವುದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ನರಶಸ್ತ್ರ ತಜ್ಞ ಡಾ.ಮುರಳಿ ಮೋಹನ್, ತಲೆ ಕುತ್ತಿಗೆಯ ಮೇಲೆ ಸ್ಥಳಾಂತರಗೊಂಡ ಸ್ಥಿತಿ ಸ್ಥಾಪಕತ್ವದಂತಹ ವಿಚಿತ್ರ ಕಾಯಿಲೆಯಿಂದ ಹುಟ್ಟಿದ ತೇಜಸ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಹೇಳಿದರು. ಹಾಗೂ ಈ ಸಮಸ್ಯೆಯಿಂದ ಮಗು ತನ್ನ ಎಡಗೈ ಮತ್ತು ಕಾಲುಗಳನ್ನು ಆಡಿಸುತ್ತಿರಲಿಲ್ಲ. ಇಂತಹ ಗಂಭೀರ ಪರಿಸ್ಥತಿಯಲ್ಲಿ, ಮೆದುಳು ಬೆನ್ನು ಹುರಿಯ ಜಂಕ್ಷನ್‌ನ ಸಂಕುಚಿತತೆ ಕುತ್ತಿಗೆಯ ಹಿಡಿತ ಮತ್ತು ಸ್ನಾಯುವಿನ ಬೆಳವಣಿಗೆಯ ಕೊರತೆಯ ಹೊರತಾಗಿಯೂ ಮಗು ಉಳಿದುಕೊಂಡಿದ್ದು ವೈದ್ಯಲೋಕವೇ ಆಶ್ಚರ್ಯ ಪಡುವಂತಾಗಿದೆ ಎಂದರು.

ತಲೆ ಬುರುಡೆಯು ಅಸಮಂಜಸ ಆಧಾರದಲ್ಲಿದ್ದು, ಅಗಲವಾದ ದೊಡ್ಡ ರಂಧ್ರವನ್ನು ಹೊಂದಿರುತ್ತದೆ. ಬೆನ್ನು ಹುರಿಯು ಮೆದುಳನ್ನು ಪ್ರವೇಶಿಸುವ ಜಾಗದ ತಲೆಬುರುಡೆಯಲ್ಲಿ ರಂಧ್ರವು ಆರಂಭವಾಗುತ್ತದೆ. ಅಲ್ಲದೆ, ತಲೆಬುರುಡೆಗೆ ಆಧಾರವಾಗಬೇಕಾದ ಮೊದಲ ಬೆನ್ನು ಮೂಳೆಗೆ ವಿರುದ್ಧವಾಗಿ ಎರಡನೇ ಬೆನ್ನು ಮೂಳೆಯ ಮೇಲೆ ಕುಳಿತುಕೊಳ್ಳುವುದೇ ರೋಗಕ್ಕೆ ಮೂಲ ಕಾರಣ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News