ಮೀಟೂ ಪ್ರಕರಣ: ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಶ್ರುತಿ ಹರಿಹರನ್

Update: 2018-11-13 16:04 GMT

ಬೆಂಗಳೂರು, ನ.13: ನಟ ಅರ್ಜುನ್ ಸರ್ಜಾ ಸ್ನೇಹಿತ ಪ್ರಶಾಂತ ಸಂಬರಗಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ನಟಿ ಶ್ರುತಿ ಹರಿಹರನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಶಾಂತ ಸಂಬರಗಿ ಅವರು ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ. ಹೀಗಾಗಿ, ಈ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಶ್ರುತಿ ಹರಿಹರನ್ ಅವರು ಅರ್ಜಿಯಲ್ಲಿ ಮನವಿ ಮಾಡಿದ್ಧಾರೆ.

ಈ ಅರ್ಜಿ ವಿಚಾರಣೆ ನಾಳೆ ಅಥವಾ ನಾಡಿದ್ದು, ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅರ್ಜಿದಾರರ ಪರವಾಗಿ ವಕೀಲ ಎಸ್.ಬಾಲಕೃಷ್ಣ ವಾದ ಮಂಡಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News