ಆಯುಷ್ ಸ್ನಾತಕೋತ್ತರ ಪದವಿ ಸೀಟುಗಳ ವಿವರ ಪ್ರಕಟ

Update: 2018-11-13 16:23 GMT

ಬೆಂಗಳೂರು, ನ.13: 2018-19ನೆ ಶೈಕ್ಷಣಿಕ ಸಾಲಿನಲ್ಲಿ ಆಯುಷ್ ಸ್ನಾತಕೋತ್ತರ ಪದವಿ ಕೋರ್ಸುಗಳಲ್ಲಿ ನ.15ರಂದು ‘De-Categorized casual vacancy Round’ ಸುತ್ತಿಗೆ ಸೀಟುಗಳ ವಿವರಗಳನ್ನು ನ.14ರಂದು ಸಂಜೆ 5.30ಕ್ಕೆ ಪ್ರಕಟಿಸಲಾಗುವುದು ಎಂದು ಆಯುಷ್ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಈ ಸುತ್ತಿನಲ್ಲಿ ಪ್ರವೇಶ ಬಯಸುವ ಆಸಕ್ತ ವಿದ್ಯಾರ್ಥಿಗಳು ಈ ಕೆಳಕಾಣಿಸಿದ ಸೂಚನೆಗಳನ್ನು ಪಾಲಿಸಿ ನ.15ರಂದು ಬೆಂಗಳೂರಿನ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿರುವ ರಾಜ್ಯ ಪರೀಕ್ಷಾ ಪ್ರಾಧಿಕಾರದಲ್ಲಿ ಹಾಜರಿರಬೇಕು ಮತ್ತು ಕಡ್ಡಾಯವಾಗಿ AIA-PGET ರ್ಯಾಂಕ್ ನಮೂದಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ.

AYUSH-PG‘De-Categorized casual vacancy Round ಸುತ್ತಿನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನಿಬಂಧನೆಗಳು: ವಿದ್ಯಾರ್ಥಿಗಳು AIA-PGET ರ್ಯಾಂಕ್ ಹೊಂದಿರಬೇಕು ಮತ್ತು ರಾಜ್ಯ ಪರೀಕ್ಷಾ ಪ್ರಾಧಿಕಾರ KEA ದಿಂದ ದಾಖಲಾತಿ ಪರಿಶೀಲನೆಯಾಗಿರಬೇಕು, VerificationSlip ಹಾಜರು ಪಡಿಸಬೇಕು.

AIA-PGET-2018 ರ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಯಾವುದೇ ವಿಷಯದಲ್ಲಿ ಸೀಟು ಹಂಚಿಕೆಯಾಗದಿರುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು ಅಥವಾ KEA ಯಲ್ಲಿ ಮೂಲ ದಾಖಲಾತಿಗಳನ್ನು ಸಲ್ಲಿಸಿರುವ ಬಗ್ಗೆ ಸ್ವೀಕೃತಿ ಪತ್ರ ನೀಡಬೇಕು.

ಭಾಗವಹಿಸುವ ವಿದ್ಯಾರ್ಥಿಗಳು ನಿಗದಿಪಡಿಸಿದ ಶುಲ್ಕಕ್ಕೆ ಡಿಮ್ಯಾಂಡ್ ಡ್ರಾಫ್ಟ್(ಡಿಡಿ)ಅನ್ನು ‘The Executive Director, KEA’ ಇವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಪಡೆದಿರಬೇಕು. ಚೆಕ್ ಮುಖಾಂತರ ಅಥವಾ ನಗದಾಗಿ ಪಾವತಿಸುವಂತಿಲ್ಲ. ಡಿಡಿ ಇಲ್ಲದೆ ಇರುವ ವಿದ್ಯಾರ್ಥಿಗಳಿಗೆ ಸೀಟು ಆಯ್ಕೆ ಮಾಡಲು ಅನುಮತಿ ಸಿಗುವುದಿಲ್ಲ.

ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಸ್ಥಳದಲ್ಲೆ ಪ್ರವೇಶಾತಿಯನ್ನು ಪಡೆಯಬೇಕು. ಬೆಳಗ್ಗೆ 9.30ರಿಂದ 10.30ರವರೆಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News