ಹಫ್ತಾ ವಸೂಲಿ ಆರೋಪ: ಕಾರ್ಪೋರೇಟರ್ ಪತಿಗಾಗಿ ಹುಡುಕಾಟ

Update: 2018-11-13 16:25 GMT

ಬೆಂಗಳೂರು, ನ.13: ಹಫ್ತಾ ವಸೂಲಿ ಮಾಡುತ್ತಿದ್ದ ಆರೋಪದಡಿ ಬಿಬಿಎಂಪಿ ಸದಸ್ಯೆ ಫರೀದಾ ಅವರ ಪತಿ ಇಶ್ತಿಯಾಕ್ ಅಹ್ಮದ್‌ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಆರೋಪಿ ಇಶ್ತಿಯಾಕ್ ಅಹ್ಮದ್, ಜನರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪದಡಿ ದೂರುಗಳು ಬಂದಿದ್ದವು. ಈ ದೂರಿನನ್ವಯ, ಮಂಗಳವಾರ ಶಿವಾಜಿನಗರ ವಾರ್ಡ್ ಸದಸ್ಯೆ ಫರೀದಾ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು ಎನ್ನಲಾಗಿದೆ.

ಇಶ್ತಿಯಾಕ್ ಅಹ್ಮದ್ ಮಾಜಿ ರೌಡಿಶೀಟರ್ ಆಗಿದ್ದು, ಡಿ.ಜೆ.ಹಳ್ಳಿ, ಶಿವಾಜಿನಗರದಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ. ಆದರೆ, ಇಶ್ತಿಯಾಕ್ ಅಹ್ಮದ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರೆಸಿದ್ದೇವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News