ವಕೀಲರನ್ನು ಗೂಂಡಾಗಳಿಂದ ರಕ್ಷಿಸಲು ಕಾಯ್ದೆ ರೂಪಿಸಿ: ವಕೀಲರ ಸಂಘ ಒತ್ತಾಯ

Update: 2018-11-13 16:54 GMT

ಬೆಂಗಳೂರು, ನ. 13: ವಕೀಲರನ್ನು ಗೂಂಡಾಗಳಿಂದ ರಕ್ಷಿಸಲು ವಕೀಲರ ರಕ್ಷಣಾ ಕಾಯ್ದೆ ರೂಪಿಸಬೇಕಾದ ತುರ್ತು ಅನಿವಾರ್ಯವಿದೆ ಎಂದು ಅಖಿಲ ಭಾರತ ವಕೀಲರ ಸಂಘದ ರಾಜ್ಯ ಸಮಿತಿ ಸರಕಾರವನ್ನು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಶಂಕರಪ್ಪ ಮಾತನಾಡಿ, ವಕೀಲ ದತ್ತಾತ್ರೇಯ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಹಾಗೂ ಕರ್ತವ್ಯನಿರತ ವಕೀಲರನ್ನು ರಕ್ಷಿಸಲು ಸೂಕ್ತ ಕಾಯ್ದೆಯನ್ನು ರಾಜ್ಯ ಸರಕಾರ ರೂಪಿಸಬೇಕೆಂದು ಆಗ್ರಹಿಸಿದರು.

ದತ್ತಾತ್ರೇಯ ಪ್ರಕರಣ: ಅ.31ರಂದು ದತ್ತಾತ್ರೇಯ ಬಂಡಿವಡ್ಡರ ಮೋಟಾರು ಸೈಕಲ್‌ನಲ್ಲಿ ಸಿಂದಗಿಯಿಂದ ತನ್ನ ಊರಾದ ಬೆಳಗನೂರಿಗೆ ಕಲ್ಲಹಳ್ಳಿ ಬಳಿಯಿರುವ ಕೆನಾಲ್ ದಾರಿ ಹಿಡಿದು ಹೋಗುತ್ತಿದ್ದಾಗ ರವೀಂದ್ರ ಹಾಗೂ ಶಂಕರಪ್ಪ ಈತನ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ, ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.

ಈ ಸಂಬಂಧ ಜಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆದರೆ ಇಲ್ಲಿತನಕ ಪೊಲೀಸರು ತನಿಖೆ ನಡೆಸಿ, ಆರೋಪಿಗಳಾದ ರವೀಂದ್ರ ಹಾಗೂ ಶಂಕರಪ್ಪನವರನ್ನು ಮಾತ್ರ ಬಂಧಿಸಿದ್ದಾರೆ. ಆದರೆ ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಬಂಧಿಸುವಲ್ಲಿ ನಿರ್ಲಕ್ಷ ತಾಳಿದ್ದಾರೆ. ಹಾಗಾಗಿ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಶಂಕರಪ್ಪ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News