ನವೀನ ಆವಿಷ್ಕಾರ ಸಂಸ್ಕೃತಿಯ ಬದಲಾವಣೆಗೆ ಕಾರಣ: ಫಾ.ಸಾಬು ಜಾರ್ಜ್
ಬೆಂಗಳೂರು, ನ.13: ತಾಂತ್ರಿಕತೆಯಲ್ಲಾಗುತ್ತಿರುವ ನವೀನ ಆವಿಷ್ಕಾರಗಳು ದೇಶಿಯ ಸಂಸ್ಕೃತಿ ಮೇಲೆ ಸಂಚಲನ ಉಂಟು ಮಾಡಿದ್ದು, ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ ಎಂದು ಸೈಂಟ್ ಕ್ಲಾರೆಟ್ ಕಾಲೇಜಿನ ಪ್ರಾಂಶುಪಾಲ ಫಾ.ಸಾಬು ಜಾರ್ಜ್ ಅಭಿಪ್ರಾಯಿಸಿದರು.
ಮಂಗಳವಾರ ನಗರದ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನಲ್ಲಿ ಆಯೋಜಿಸಿದ್ದ ಥಿಂಕಿಂಗ್ ಲೋಕಲ್, ಗೋಯಿಂಗ್ ಗ್ಲೋಬಲ್ ಒಂದು ದಿನದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಜಾಗತೀಕರಣ ಹಾಗೂ ಆಧುನಿಕತೆಯ ಪರೆಂಪರೆಯು ದೇಶಿಯ ಸಂಸ್ಕೃತಿಯಲ್ಲೂ ಸಂಚಲನ ಉಂಟುಮಾಡಿದೆ. ಆರ್ಥಿಕಾಭಿವೃದ್ದಿಯ ಜತೆಗೆ ತಾಂತ್ರಿಕತೆಯ ಪರಿಣಾಮ ಉದ್ಯಮಶೀಲತೆಯ ಮೇಲೆ ಹೆಚ್ಚು ಗಮನ ಸೆಳೆದಿದೆ ಎಂದು ಅವರು ತಿಳಿಸಿದರು.
ಡಬ್ಲೂಟಿಸಿ ಸಲಹೆಗಾರ್ತಿ ಉಮಾರೆಡ್ಡಿ ಮಾತನಾಡಿ, ಸಮಾಜಲ್ಲಿನ ಉದ್ಯಮಶೀಲತೆಯಲ್ಲಿ ಡಿಜಿಟಲೈಸೇಷನ್ ಪಾತ್ರ ಮಹತ್ವದಾಗಿದೆ. ಈ ಕಾಲದ ವಾಣಿಜ್ಯ ಆರ್ಥಿಕತೆಯ ವ್ಯವಹಾರ ನೀತಿಗೆ ತಕ್ಕಂತೆ ಪರಿವರ್ತನೆ ಅಗತ್ಯವಿದೆ ಎಂದು ತಿಳಿಸಿದರು.
ಸೈಂಟ್ ಕ್ಲಾರೆಟ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಫಾ.ಬೆನ್ನಿಮಾಥ್ಯು ಮಾತನಾಡಿ, ಇಂದಿನ ಜಾಗತೀಕರಣ ವೈಜ್ಞಾನೀಕರಣ ಮತ್ತು ಯಾಂತ್ರೀಕರಣದ ಸಂದರ್ಭಗಳಲ್ಲಿ ದೇಶದ ಜನತೆ ಉದ್ಯಮ ಶೀಲತೆ ಮತ್ತು ಡಿಜಿಟಲೈಸೇಷನ್ ವಿಚಾರಗಳ ಬಗ್ಗೆ ಪಂಡಿತರು, ವಿದ್ವಾಂಸರು, ಸಂಶೋಧಕರು ಅನುಭವಿಗಳು ಚರ್ಚೆ ನಡೆಸುವುದರಿಂದ ಅದರ ಸಾಧಕ ಬಾಧಕಗಳನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಧ್ಯಾಪಕರಾದ ಮಾದೇಶ್ ಎನ್, ಮರಿಯ ಡಿಸೋಜ್, ಜಯಲಕ್ಷ್ಮಿಆರ್, ತ್ರಿಯೋಗಿನಾಥಪಾಂಡೆ, ಸೀಮಾ ಜೋಸೇಫ್, ಕಾರ್ಯಕ್ರಮದ ಸಂಯೋಜಕ ಡಾ. ಹರ್ಮಿತ್ ಮತ್ತಾರು ಉಪಸ್ಥಿತರಿದ್ದರು.