ಅಂಬೇಡ್ಕರ್, ಅನಂತಮೂರ್ತಿ ಪುಸ್ತಕಕ್ಕೆ ಕೈದಿಗಳ ಬೇಡಿಕೆ: ಕೈದಿಗಳ ಸಾಹಿತ್ಯ ಪ್ರಕಟಿಸುವ ಚಿಂತನೆ

Update: 2018-11-13 17:08 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 13: ವಿವಿಧ ಅಪರಾಧ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಸೇರಿರುವ ಕೈದಿಗಳಿಗೆ ಅಂಬೇಡ್ಕರ್, ಲೋಹಿಯಾ ಹಾಗೂ ಅನಂತಮೂರ್ತಿ ಅವರ ಪುಸ್ತಕಗಳನ್ನು ಓದುವ ಹಂಬಲ. ಈ ಲೇಖಕರ ಆಯ್ದ ಕೃತಿಗಳನ್ನು ಕೇಂದ್ರ ಕಾರಾಗೃಹದ ಗ್ರಂಥಾಲಯಕ್ಕೆ ಪೂರೈಕೆ ಮಾಡಿ ಎಂದು 60ಕ್ಕೂ ಹೆಚ್ಚು ಜೈಲು ಬಂಧನ ಅನುಭವಿಸುತ್ತಿರುವವರು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ಕಾರಾಗೃಹದ ಗ್ರಂಥಾಲಯದಲ್ಲೇ ಇರುವ 300ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿರುವ ಮಹಿಳಾ ಕೈದಿಗಳಿದ್ದಾರೆ. ದೂರ ಶಿಕ್ಷಣದಲ್ಲಿ ಪದವಿ ಪಡೆಯಲು 300 ಬಂದಿಗಳು ನೋಂದಣಿ ಮಾಡಿಸಿದ್ದಾರೆ. ಹೊರ ರಾಜ್ಯಗಳ ಕೈದಿಗಳು ಕನ್ನಡ ಕಲಿಯಲು ಅತ್ಯುತ್ಸಾಹ ತೋರಿಸುತ್ತಿದ್ದಾರೆ. ಯಾವ ಕಮ್ಮಟದ ಸಿದ್ಧತೆಯೂ ಇಲ್ಲದೆ, ಜೈಲಿನ ಒಂಟಿತನದಲ್ಲೇ ತಮ್ಮ ಮನಸ್ಸಿನ ತುಡಿತಗಳನ್ನು ಮನಮುಟ್ಟುವಂತೆ ಅವರು ರಚಿಸಿದ್ದಾರೆ.

ಬರಹ, ಓದಿನಲ್ಲಿ ಆಸಕ್ತಿ ಇರುವ ನೂರಾರು ಮಂದಿ ಇದ್ದಾರೆ. ಅವರೆಲ್ಲರಿಗೂ ಅನುಕೂಲ ಆಗುವಂತೆ ಇದೇ ನವೆಂಬರ್‌ನಲ್ಲಿ ಕಾರಾಗೃಹದಲ್ಲಿ ಕತೆ ಹಾಗು ಕಾವ್ಯ ಕಮ್ಮಟ ಸಂಘಟಿಸಲು ತೀರ್ಮಾನಿಸಿದ್ದೇವೆ. ಕಮ್ಮಟದ ನಂತರ ಅವರು ಬರೆದದ್ದರಲ್ಲಿ ಸೂಕ್ತ ಆದವುಗಳನ್ನು ಆರಿಸಿ ಪ್ರಾಧಿಕಾರದಿಂದಲೇ ಪ್ರಕಟಿಸುವ ತೀರ್ಮಾನ ಮಾಡಿದ್ದೇವೆ. ಇದು ಭಾರತದ ಕಾರಾಗೃಹಗಳ ಇತಿಹಾಸದಲ್ಲೇ ಮೊದಲ ಪ್ರಯತ್ನ ಆಗಲಿದೆ ಎಂದು ವಸುಂಧಾರಾ ಭೂಪತಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News