ಅಡವಿಟ್ಟಿದ್ದ ಬಿಬಿಎಂಪಿ ಆಸ್ತಿ ಮರಳಿ ಪಾಲಿಕೆ ವಶಕ್ಕೆ: ಆಡಳಿತ ಪಕ್ಷದ ನಾಯಕ ಎಂ.ಶಿವರಾಂ

Update: 2018-11-14 16:29 GMT

ಬೆಂಗಳೂರು, ನ.14: ಹುಡ್ಕೋ ಸಂಸ್ಥೆಯ ಮೂಲಕ ಸಾಲ ಪಡೆಯುವ ಸಲುವಾಗಿ ಅಡಮಾನವಿಟ್ಟಿದ್ದ ಬಿಬಿಎಂಪಿಗೆ ಸೇರಿದ ಎರಡು ಕಟ್ಟಡಗಳು ಶುಕ್ರವಾರ ಋಣಮುಕ್ತವಾಗಲಿವೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಂ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾಜಿನಗರ ಕಾಂಪ್ಲೆಕ್ಸ್ ಮತ್ತು ಫ್ರೇಜರ್ ಟೌನ್‌ನಲ್ಲಿರುವ ಕಸಾಯಿ ಖಾನೆ ಕಟ್ಟಡವನ್ನು ಹುಡ್ಕೋ ಸಂಸ್ಥೆಗೆ ಅಡಮಾನವಿಟ್ಟು ಸಾವಿರಾರು ಕೋಟಿ ರೂ.ಗಳನ್ನು ಸಾಲ ಪಡೆಯಲಾಗಿತ್ತು. ಆದರೆ, ಬಿಬಿಎಂಪಿ ಹಾಗೂ ಸರಕಾರದಿಂದ ಹುಡ್ಕೋಗೆ ನೀಡಬೇಕಿದ್ದ ಸಾಲದ ಹಣವನ್ನು ಮರು ಪಾವತಿ ಮಾಡಲಾಗಿದ್ದು, ಆಸ್ತಿಯ ದಾಖಲಾತಿಗಳನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹುಡ್ಕೋ ಸಂಸ್ಥೆಯಿಂದ ಸಾಲ ಪಡೆಯಲು ಇಡಲಾಗಿದ್ದ ಸಂಬಂಧಪಟ್ಟ ದಾಖಲಾತಿ ಪತ್ರಗಳನ್ನು ಸಂಸ್ಥೆಯಿಂದ ಹಿಂದಕ್ಕೆ ಪಡೆಯುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಅಡಮಾನವಿಟ್ಟಿದ್ದ ಕಟ್ಟಡಗಳನ್ನು ಈಗಾಗಲೇ ಪಾಲಿಕೆ ವಶಪಡಿಸಿಕೊಂಡಿದೆ. ಇನ್ನುಳಿದಂತೆ ಮಾರುಕಟ್ಟೆ ದಾಸಪ್ಪ ಆಸ್ಪತ್ರೆ, ಯುಬಿಸಿಟಿ ಸೇರಿದಂತೆ ಬಿಬಿಎಂಪಿಗೆ ಸೇರಿದ ಐದು ಕಟ್ಟಡಗಳನ್ನು ಶೀಘ್ರದಲ್ಲಿಯೇ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News