ಕೆಪಿಎಸ್ಸಿ: ಇಲಾಖಾ ಪರೀಕ್ಷೆಗಳ ಫಲಿತಾಂಶ ಪ್ರಕಟ

Update: 2018-11-14 16:58 GMT

ಬೆಂಗಳೂರು, ನ.14: ಕರ್ನಾಟಕ ಲೋಕಸೇವಾ ಆಯೋಗ 2018ನೆ ಸಾಲಿನಲ್ಲಿ ನಡೆಸಿದ ಪ್ರಥಮ ಅಧಿವೇಶನ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಆಯೋಗದ ವೆಬ್‌ಸೈಟ್ http://kpsc.nic ನಲ್ಲಿ ಪ್ರಕಟಿಸಲಾಗಿದೆ. ಡಿ.5ರೊಳಗೆ ಅಂಕಗಳ ಮರು ಎಣಿಕೆಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು.

ಆಯೋಗವು 2018ನೆ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗೆ ಸರಕಾರಿ ನೌಕರರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿ.8ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.080-30574944/30574945ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News