ಅಂತರ್‌ರಾಷ್ಟ್ರೀಯ ಚರ್ಮ ತಜ್ಞ ಸಂಘದ ಅಧ್ಯಕ್ಷರಾಗಿ ಡಾ.ವೆಂಕಟರಾಮ್ ಆಯ್ಕೆ

Update: 2018-11-15 17:05 GMT

ಬೆಂಗಳೂರು, ನ. 15: ಅಂತರ್‌ರಾಷ್ಟ್ರೀಯ ಚರ್ಮ ತಜ್ಞ ಮತ್ತು ಸೌಂದರ್ಯ ಶಸ್ತ್ರ ತಜ್ಞರ ಸಂಘದ ಅಧ್ಯಕ್ಷ ಹುದ್ದೆಗೆ ಪ್ರಥಮ ಭಾರತೀಯರಾಗಿ ಚರ್ಮ ಹಾಗೂ ಕೂದಲು ಕಸಿ ತಜ್ಞ ಡಾ.ವೆಂಕಟರಾಮ್ ಆಯ್ಕೆಯಾಗಿದ್ದಾರೆ.

ಡಾ.ವೆಂಕಟರಾಮ್‌ರವರು ಏಷ್ಯಾ ಚರ್ಮ ಮತ್ತು ಲೈಂಗಿಕ ತಜ್ಞರ ಅಕಾಡೆಮಿಯ ಫೆಲೋಶಿಪ್‌ಗೆ ಭಾಜನರಾಗಿದ್ದು, ಅಮೆರಿಕಾದ ಚರ್ಮಶಾಸ್ತ್ರ ಚಿಕಿತ್ಸೆ ಸಂಘದ ಗೌರವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಲಂಡನ್ ರಾಯಲ್ ಕಾಲೇಜಿನಲ್ಲಿ ಚರ್ಮರೋಗದಲ್ಲಿ ಡರ್ಮಟೋಪೆಥಾಲಜಿ ಪದವಿ ಪಡೆದಿದ್ದು, ದೇಶದಲ್ಲಿರುವ ಕೆಲವು ಚರ್ಮ ರೋಗ ಲಕ್ಷಣ ತಜ್ಞರ ಪೈಕಿ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News