ಸಚಿವ ಪ್ರಿಯಾಂಕ್ ಖರ್ಗೆಗೆ ಇಂಟೆಲ್ ಸಂಸ್ಥೆಯಿಂದ 'ತಂತ್ರಜ್ಞಾನ ವಿಷನರಿ ಪ್ರಶಸ್ತಿ'ಯ ಗೌರವ

Update: 2018-11-15 17:09 GMT

ಬೆಂಗಳೂರು,ನ.15: ವಿಶ್ವದ ಪ್ರತಿಷ್ಠಿತ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಾದ ‘ಇಂಟೆಲ್’ ಭಾರತದಲ್ಲಿ ಯಶಸ್ವಿಯಾಗಿ ಎರಡು ದಶಕಗಳನ್ನು ಪೂರೈಸಿದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ 'ತಂತ್ರಜ್ಞಾನ ವಿಷನರಿ ಪ್ರಶಸ್ತಿ' ನೀಡಿ ಗೌರವಿಸಿತು.

ಸಂಸ್ಥೆಯ ಎರಡು ದಶಕಗಳ ಸಾಧನೆಗೆ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿಕೊಂಡಿರುವ ಇಂಟೆಲ್ ಸಂಸ್ಥೆ ಪ್ರಿಯಾಂಕ್ ಅವರ ಸಹಕಾರವನ್ನು ಸ್ಮರಿಸಿ 'ಇಂಟೆಲ್ ಟೆಕ್ನಾಲಜಿ ವಿಷನರಿ ಪ್ರಶಸ್ತಿ' ನೀಡಲಾಯಿತು. ನ.15 ರಂದು ಸಂಜೆ ಇಂಟೆಲ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಸಚಿವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಿಯಾಂಕ್ ಖರ್ಗೆ ಅವರು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಈ ಅವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಾಗಿ ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News