ಮೆಲಾನಿಯಾ ಕೋಪಕ್ಕೆ ಗುರಿಯಾದ ಟ್ರಂಪ್ ಸಹಾಯಕಿ ವಜಾ

Update: 2018-11-15 17:27 GMT

ವಾಶಿಂಗ್ಟನ್, ನ. 15: ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರ ಅವಕೃಪೆಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಿರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಮೀರಾ ರಿಕಾರ್ಡೆಲ್‌ರನ್ನು ಬುಧವಾರ ವಜಾಗೊಳಿಸಲಾಗಿದೆ.

ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಮೀರಾ ರಿಕಾರ್ಡೆಲ್ ಶ್ವೇತಭವನದಲ್ಲಿ ಸೇವೆ ಸಲ್ಲಿಸುವ ಅರ್ಹತೆಯನ್ನು ಉಳಿಸಿಕೊಂಡಿಲ್ಲ ಎಂಬುದಾಗಿ ಮೆಲಾನಿಯಾರ ಕಚೇರಿ ಮಂಗಳವಾರ ಹೇಳಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

‘‘ಮೀರಾ ರಿಕಾರ್ಡೆಲ್ ಟ್ರಂಪ್ ಆಡಳಿತದಲ್ಲಿ ಹೊಸ ಪಾತ್ರವನ್ನು ವಹಿಸಲಿದ್ದಾರೆ ಹಾಗೂ ಅಧ್ಯಕ್ಷರನ್ನು ಬೆಂಬಲಿಸುವುದನ್ನು ಅವರು ಮುಂದುವರಿಸಲಿದ್ದಾರೆ’’ ಎಂದು ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮೆಲಾನಿಯಾ ಕಳೆದ ತಿಂಗಳು ಕೈಗೊಂಡ ಆಫ್ರಿಕ ಪ್ರವಾಸಕ್ಕೆ ಸಂಬಂಧಿಸಿ ಈ ಬೆಳವಣಿಗೆ ನಡೆದಿದೆ. ಪ್ರಥಮ ಮಹಿಳೆಯ ಸಿಬ್ಬಂದಿಯೊಂದಿಗೆ ಮೀರಾ ರಿಕಾರ್ಡೆಲ್ ವಾಗ್ವಾದ ನಡೆಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News