ಒಂದೇ ತಂಡದಲ್ಲಿ ಆಡಿದ ಸಲಿಂಗಿ ಜೋಡಿ ನಿಕೆರ್ಕ್-ಕಾಪ್

Update: 2018-11-15 18:31 GMT

ಸೈಂಟ್‌ಲೂಸಿಯಾ, ನ.15: ದಕ್ಷಿಣ ಆಫ್ರಿಕದ ಮಹಿಳಾ ಕ್ರಿಕೆಟಿಗರಾದ ಡೇನ್ ವ್ಯಾನ್ ನಿಕೆರ್ಕ್ ಹಾಗೂ ಮರಿಝಾನೆ ಕಾಪ್ ಐಸಿಸಿ ಟೂರ್ನಮೆಂಟ್‌ನಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡಿದ ಮೊದಲ ವಿವಾಹಿತ ಸಲಿಂಗಿ ಜೋಡಿ ಎನಿಸಿಕೊಂಡಿದೆ.

ಡರೆನ್ ಸಮ್ಮಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಮಹಿಳಾ ಟ್ವೆಂಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡದ ಪರ ಶ್ರೀಲಂಕಾ ವಿರುದ್ಧ ಈ ಜೋಡಿ ಆಡಿತು. ದಕ್ಷಿಣ ಆಫ್ರಿಕ ತಂಡದ ನಾಯಕಿ ನೀಕರ್ಕ್ 45 ಎಸೆತಗಳಲ್ಲಿ ಔಟಾಗದೆ 33 ರನ್ ಗಳಿಸಿದ್ದರೆ, ಕಾಪ್ 16 ಎಸೆತಗಳಲ್ಲಿ 16 ರನ್ ಗಳಿಸಿ ದಕ್ಷಿಣ ಆಫ್ರಿಕಕ್ಕೆ 7 ವಿಕೆಟ್ ಗೆಲುವು ತಂದರು.

ಹಾಲಿ ಅಂತರ್‌ರಾಷ್ಟ್ರೀಯ ಆಟಗಾರ್ತಿಯರ ಪೈಕಿ ನಿಕೆರ್ಕ್-ಕಾಪ್ ವಿವಾಹವಾಗಿರುವ ಎರಡನೇ ಸಲಿಂಗಿ ಜೋಡಿಯಾಗಿದ್ದಾರೆ. ನ್ಯೂಝಿಲೆಂಡ್‌ನ ಆ್ಯಮಿ ಸ್ಯಾಟರ್ತ್‌ವೇಟ್ ಹಾಗೂ ಲಿಯಾ ತಹುಹು ಮೊದಲ ಜೋಡಿಯಾಗಿದ್ದಾರೆ.

ವ್ಯಾನ್ ನಿಕೆರ್ಕ್ ಈ ವರ್ಷದ ಜುಲೈನಲ್ಲಿ ಸಹ ಆಟಗಾರ್ತಿ ಕಾಪ್‌ರನ್ನು ವಿವಾಹವಾಗಿದ್ದರು. ನಿಕೆರ್ಕ್ ದ.ಆಫ್ರಿಕದ ಪರ 71 ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 1,539 ರನ್ ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕಗಳಿವೆ. ಮತ್ತೊಂದೆಡೆ, ಕಾಪ್ 68 ಟಿ-20 ಪಂದ್ಯಗಳಲ್ಲಿ 726 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News