ಪ್ರೊ ಕಬಡ್ಡಿ: ಪಾಟ್ನಾಕ್ಕೆ ಜಯ

Update: 2018-11-15 19:00 GMT

ಮುಂಬೈ, ನ.15: ಪರ್ದೀಪ್ ನರ್ವಾಲ್ ಪರಾಕ್ರಮದ ನೆರವಿನಿಂದ ಪಾಟ್ನಾ ಪೈರೇಟ್ಸ್ ತಂಡ ದಬಾಂಗ್ ದಿಲ್ಲಿ ವಿರುದ್ಧ ಗುರುವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ 38-35 ಅಂತರದಿಂದ ರೋಚಕ ಜಯ ಸಾಧಿಸಿದೆ.

ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ತಂಡ ತಮಿಳ್ ತಲೈವಾಸ್ ತಂಡವನ್ನು 36-22 ಅಂತರದಿಂದ ಸೋಲಿಸಿದೆ.

ಪರ್ದೀಪ್ ಪಾಟ್ನಾ ಪರ 16 ಅಂಕ ಗಳಿಸಿದರೆ, ಮಂಜೀತ್ 8 ಅಂಕ ಗಳಿಸಿ ಸಾಥ್ ನೀಡಿದರು. ದಿಲ್ಲಿ ಪರ ನವೀನ್‌ಕುಮಾರ್ 15 ಅಂಕ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದರೆ, ದಿಲ್ಲಿ ತಂಡ ಪಂದ್ಯದ ಹೆಚ್ಚಿನ ಸಮಯ ಹಿಡಿತ ಸಾಧಿಸಿದ್ದರೂ ಹಲವು ಅವಕಾಶವನ್ನು ಕೈಚೆಲ್ಲಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News