ಖಶೋಗಿ ಹತ್ಯೆ: 17 ಆರೋಪಿಗಳ ವಿರುದ್ಧ ಅಮೆರಿಕ ದಿಗ್ಬಂಧನ

Update: 2018-11-16 17:01 GMT

ವಾಶಿಂಗ್ಟನ್, ನ. 16: ಟರ್ಕಿ ದೇಶದ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲ್ ಕಚೇರಿಯಲ್ಲಿ ನಡೆದ ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಹತ್ಯೆಯಲ್ಲಿ ಶಾಮೀಲಾದ 17 ಸೌದಿ ಪ್ರಜೆಗಳ ವಿರುದ್ಧ ಅಮೆರಿಕ ಗುರುವಾರ ದಿಗ್ಬಂಧನ ಘೋಷಿಸಿದೆ.

 ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಮಾಜಿ ಮುಖ್ಯ ಸಲಹೆಗಾರ ಸೌದ್ ಅಲ್-ಕಹ್ತಾನಿ ಮತ್ತು ಸೌದಿ ಕೌನ್ಸುಲ್ ಜನರಲ್ ಮುಹಮ್ಮದ್ ಅಲೊತೈಬಿ ದಿಗ್ಬಂಧನಕ್ಕೆ ಒಳಗಾದವರ ಪಟ್ಟಿಯಲ್ಲಿ ಇದ್ದಾರೆ ಎಂದು ಅಮೆರಿಕ ಆಡಳಿದ ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News