ಗುಜರಾತ್, ಜೆಪುರಕ್ಕೆ ಜಯ

Update: 2018-11-16 18:37 GMT

ಅಹ್ಮದಾಬಾದ್, ನ.16: ಗುಜರಾತ್ ಫೋರ್ಚುನ್‌ಜೈಂಟ್ಸ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಜಯ ದಾಖಲಿಸಿವೆ.

ಗುಜರಾತ್ ತಂಡ ಪ್ರಪಂಜನ್(9 ಅಂಕ)ನೆರವಿನಿಂದ ಬಂಗಾಳ ವಾರಿಯರ್ಸ್ ತಂಡವನ್ನು 35-23 ಅಂತರದಿಂದ ಮಣಿಸಿತು.

ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ತಂಡ ಯುಪಿ ಯೋಧಾ ತಂಡವನ್ನು 45-28 ಅಂತರದಿಂದ ಸೋಲಿಸಿ ಆಘಾತ ನೀಡಿತು. ದೀಪಕ್ ಹೂಡ(10 ಅಂಕ)ಹಾಗೂ ಅಜಿಂಕ್ಯ ಪವಾರ್(9) ಜೈಪುರ ಗೆಲುವಿಗೆ ನೆರವಾದರು. ಯುಪಿ ಪರ ಕನ್ನಡಿಗ ರಿಶಾಂಕ್ ದೇವಾಡಿಗ 7 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News