ಡಿವೈಡರ್‌ಗೆ ಡಿಕ್ಕಿ ಹೊಡೆದ ಶಾಲಾ ಬಸ್: 12 ವಿದ್ಯಾರ್ಥಿಗಳಿಗೆ ಗಾಯ

Update: 2018-11-17 05:40 GMT

ನೊಯ್ಡ, ನ.17: ಶಾಲಾ ಬಸ್‌ವೊಂದು ತಡೆಬೇಲಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ವಿದ್ಯಾರ್ಥಿಗಳು ಗಾಯಗೊಂಡಿದ್ದರೆ, ಚಾಲಕ ಹಾಗೂ ಕಂಡಕ್ಟರ್ ಸ್ಥಿತಿ ಗಂಭೀರವಾಗಿದೆ.

  ನೊಯ್ಡದ ರಜನಿಗಂಧ ಚೌಕ್ ಅಂಡರ್‌ಪಾಸ್ ಬಳಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ.

 30 ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಶಾಲೆಯ ಬಸ್ ಅಂಡರ್‌ಪಾಸ್ ಬಳಿಯ ಡಿವೈಡರ್‌ಗೆ ಢಿಕ್ಕಿ ಹೊಡೆದಿತ್ತು. ಘಟನೆಯ ತಕ್ಷಣ ಗಾಯಾಳುಗಳನ್ನು ಕೈಲಾಶ್ ಆಸ್ಪತ್ರೆಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News