ತುಂಬೆ ಪ್ರೀಮಿಯರ್ ಟಿ -20 ಲೀಗ್: ಒಎಂಎ ಎಮಿರೆಟ್ಸ್ ಚಾಂಪಿಯನ್

Update: 2018-11-17 17:34 GMT

ದುಬೈ, ನ.17: ಮೊದಲ ಆವೃತ್ತಿಯ ತುಂಬೆ ಪ್ರೀಮಿಯರ್ ಟಿ -20 ಲೀಗ್ ಟೂರ್ನಮೆಂಟ್‌ನಲ್ಲಿ ಒಎಂಎ ಎಮಿರೆಟ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಅಜ್ಮಾನ್ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಶಾರ್ಜಾ ವಿದ್ಯುತ್ ಮತ್ತು ನೀರು ಪ್ರಾಧಿಕಾರ (ಎಸ್‌ಇಡಬ್ಲುಎ) ತಂಡವನ್ನು ಒಎಂಎ ಎಮಿರೆಟ್ಸ್ ತಂಡ ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

15 ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳಲ್ಲಿ 8 ತಂಡಗಳು ಹಣಾಹಣಿ ನಡೆಸಿತ್ತು. ನೋವಾ ಹೆಲ್ತ್ ಕೇರ್, ಜಿಇಸಿಒ ಐಪಿಎಲ್, ತುಂಬೆ ಗ್ರೂಪ್, ಝುಲೇಖಾ ಹಾಸ್ಪಿಟಲ್, ಎಸ್ ಇಡಬ್ಲ್ಯುಎ, ಎಮಿರೆಟ್ಸ್ ಎನ್‌ಬಿಡಿ, ಎಡಬ್ಲ್ಯು ರೊಸ್ಟಾಮನಿ ಮತ್ತು ಒಎಂಎ ಎಮಿರೆಟ್ಸ್ ತಂಡಗಳು ಪಾಲ್ಗೊಂಡಿದ್ದವು

ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ತುಂಬೆ ಟೆಕ್ನೋಲಾಜಿ ನಿರ್ದೇಶಕ (ಕಾರ್ಯಾಚರಣೆ) ಮತ್ತು ತುಂಬೆ ಗ್ರೂಪ್ ಸಿಎಸ್‌ಆರ್ ಕಮಿಟ ಚೇರ್ಮನ್ ಅಕ್ರಮ್ ಮೊಯ್ದಿನ್ ತುಂಬೆ ಪ್ರಶಸ್ತಿ ವಿತರಿಸಿದರು. ಯುಎಇ ಕ್ರಿಕೆಟರ್ ಇಮ್ರಾನ್ ಹೈದರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News