ಶ್ರುಬ್‌ಸೋಲ್ ಹ್ಯಾಟ್ರಿಕ್: ಇಂಗ್ಲೆಂಡ್ ಗೆ ಜಯ

Update: 2018-11-17 18:40 GMT

ಗ್ರಾಸ್‌ಐಸ್ಲೆಟ್ , ನ.17: ಅನ್ಯಾ ಶ್ರುಬ್‌ಸೋಲ್ ಹ್ಯಾಟ್ರಿಕ್ ವಿಕೆಟ್ ನೆರವಿನಲ್ಲಿ ಇಂಗ್ಲೆಂಡ್ ತಂಡ ಇಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿದೆ.

ಸೈಂಟ್ ಲೂಸಿಯಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕ ತಂಡ ಶ್ರುಬ್‌ಸೋಲ್ ಮತ್ತು ನಟಾಲಿಯಾ ಸ್ಕೀವೆರ್ ದಾಳಿಗೆ ಸಿಲುಕಿ 19.3 ಓವರ್‌ಗಳಲ್ಲಿ 85 ರನ್‌ಗಳಿಗೆ ಆಲೌಟಾಗಿದೆ.

ಚ್ಲೋಯ್ ಟ್ರೆಯೊನ್ (27) ದಕ್ಷಿಣ ಆಫ್ರಿಕ ತಂಡದ ಪರ ಗರಿಷ್ಠ ಸ್ಕೋರ್ ಗಳಿಸಿದರು.

ಮಿಗ್ನಾನ್ ಡು ಪ್ರೀಝ್ (16), ಲಿಝೆಲ್ಲೆ ಲೀ (12) ಎರಡಂಕೆಯ ಸ್ಕೋರ್ ದಾಖಲಿಸಿದರು.

ದಕ್ಷಿಣ ಆಫ್ರಿಕದ ಸ್ಕೋರ್ 7 ವಿಕೆಟ್ ನಷ್ಟದಲ್ಲಿ 85ಕ್ಕೆ ತಲುಪಿದ್ದಾಗ ಕೊನೆಯ ಓವರ್ ಬೌಲಿಂಗ್ ಮಾಡಿದ ಅನ್ಯಾ ಶ್ರುಬ್‌ಸೋಲ್ 19.1ನೇ ಓವರ್‌ನಲ್ಲಿ ಶಬ್ನಿಮ್ ಇಸ್ಮಾಯೀಲ್ (1) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

19.2ನೇ ಎಸೆತದಲ್ಲಿ ಯೊಲಾನಿ ಪ್ಲೋರೀ (4) ಮತ್ತು 19.3ನೇ ಓವರ್‌ನಲ್ಲಿ ಮಸಬಾಟ ಕ್ಲಾಸಾ(0) ರನ್ನು ಹಿಂದಕ್ಕೆ ಕಳುಹಿಸುವ ಮೂಲಕ ಹ್ಯಾಟ್ರಿಕ್ ಪಡೆದರು. ಇದರೊಂದಿಗೆ ದಕ್ಷಿಣ ಆಫ್ರಿಕ ಆಲೌಟಾಗಿದೆ. ಗೆಲುವಿಗೆ 86 ರನ್‌ಗಳ ಸವಾಲು ಪಡೆದ ಇಂಗ್ಲೆಂಡ್ ತಂಡ 14.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 87 ರನ್ ಗಳಿಸಿತು. ಡ್ಯಾನಿಲ್ಲೇ ವೇಟ್ 27, ಟಾಮಿ ಬಿಯೊಮೊಂಟ್ 24, ನಟಾಲಿಯಾ ಸ್ಕೀವೆರ್ 2ರನ್, ಹೀಥರ್‌ನೈಟ್ ಔಟಾಗದೆ 14 ರನ್ ಮತ್ತು ಅಮಿ ಎಲೆನ್ ಜೊನೆಸ್ ಔಟಾಗದೆ 14 ರನ್ ಗಳಿಸಿದರು. ಆಫ್ರಿಕ ತಂಡದ ನಾಯಕಿ ಡೇನ್ ವಾನ್ ನೈಕರ್ಕ್ 13ಕ್ಕೆ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ದಕ್ಷಿಣ ಆಫ್ರಿಕ 19.3 ಓವರ್‌ಗಳಲ್ಲಿ ಆಲೌಟ್ 85( ಟ್ರೆಯೊನ್ 27, ಪ್ರೀಝ 16; ಸ್ಕೀವೆರ್ 4ಕ್ಕೆ 3, ಶ್ರುಬ್‌ಸೋಲೆ 11ಕ್ಕೆ 3)

►ಇಂಗ್ಲೆಂಡ್ 14.1 ಓವರ್‌ಗಳಲ್ಲಿ 87/3(ವಿಟ್ಟ್ 27, ಟಾಮಿ 24; ನೈಕರ್ಕ್ 13ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News