ಮೇರಿಕೋಮ್, ಮನೀಶಾ ಭಾಗ್ಯವತಿ ಕ್ವಾರ್ಟರ್ ಫೈನಲ್‌ಗೆ

Update: 2018-11-18 18:07 GMT

ಹೊಸದಿಲ್ಲಿ, ನ.18: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕದ ಗೆಲ್ಲುವ ಭರವಸೆ ಮೂಡಿಸಿರುವ ಭಾರತದ ಹಿರಿಯ ಬಾಕ್ಸರ್ ಎಂಸಿ ಮೇರಿಕೋಮ್ ರವಿವಾರ ಏಕಪಕ್ಷೀಯವಾಗಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

48 ಕೆಜಿ ವಿಭಾಗದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಕಝಕ್‌ಸ್ತಾನದ ಕಸ್ಸೆನಯೆವಾರನ್ನು 5-0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಮೇರಿಕೋಮ್ ಅಂತಿಮ-8ರ ಸುತ್ತಿನಲ್ಲಿ ಚೀನಾದ ವು ಯು ಸವಾಲು ಎದುರಿಸಲಿದ್ದಾರೆ.ಇದಕ್ಕೂ ಮೊದಲು ನಡೆದ ಮತ್ತೊಂದು ಪಂದ್ಯದಲ್ಲಿ ಯುವ ಬಾಕ್ಸರ್ ಮನೀಶಾ ವೌನ್ 54 ಕೆಜಿ ತೂಕ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್, ಕಝಕ್‌ಸ್ತಾನದ ಡಿನಾ ರೆಲಮನ್‌ರನ್ನು 5-0 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪದಕ ಜಯಿಸಲು ಇನ್ನು ಒಂದು ಹೆಜ್ಜೆ ಹಿಂದಿದ್ದಾರೆ.

ಭಾರತದ ಇನ್ನಿಬ್ಬರು ಬಾಕ್ಸರ್‌ಗಳಾದ ಲವ್ಲಿನಾ ಬೊರ್ಗೊಹೈನ್(69ಕೆಜಿ) ಹಾಗೂ ಭಾಗ್ಯವತಿ ಕಚರಿ(81ಕೆಜಿ) ಪ್ರಿ-ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕ್ರಮವಾಗಿ 5-0 ಹಾಗೂ 4-1 ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ತನಗಿಂತ ಹೆಚ್ಚು ಅನುಭವವಿರುವ ಎದುರಾಳಿಯನ್ನು 5-0 ಅಂತರದಿಂದ ಸೋಲಿಸಿದ್ದ 20ರ ಹರೆಯದ ಹರ್ಯಾಣದ ಬಾಕ್ಸರ್ ಮನೀಶಾ ರವಿವಾರ ಕಝಕ್‌ಸ್ತಾನದ ಡಿನಾ ರೆಲಮನ್‌ರನ್ನು ಎರಡನೇ ಬಾರಿ ಸೋಲಿಸಿದರು. ಈ ವರ್ಷಾರಂಭದಲ್ಲಿ ಪೊಲೆಂಡ್‌ನಲ್ಲಿ ನಡೆದಿದ್ದ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಝಕ್ ಬಾಕ್ಸರ್‌ರನ್ನು ಮಣಿಸಿದ್ದರು. ಮನೀಶಾ ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಹಾಗೂ 2016ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಬಲ್ಗೇರಿಯದ ಸ್ಟೋಯ್ಕೋ ಪೆಟ್ರೊವಾರನ್ನು ಎದುರಿಸಲಿದ್ದಾರೆ.

ಕಳೆದ ವರ್ಷ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಲವ್ಲಿನಾ 2014ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಪನಾಮದ ಅಥೆನಾ ಬಿಲೊನ್ ವಿರುದ್ಧ ಕಠಿಣ ಹೋರಾಟ ನೀಡಿ 5-0 ಅಂತರದಿಂದ ಜಯಶಾಲಿಯಾದರು. ಅಸ್ಸಾಂನ 21ರ ಹರೆಯದ ಲವ್ಲಿನಾ ಮಂಗಳವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯದ ಸ್ಕಾಟ್ ಫ್ರಾನ್ಸಿಸ್‌ರನ್ನು ಎದುರಿಸಲಿದ್ದಾರೆ.

‘‘ಇದು ನನ್ನ ಪಾಲಿಗೆ ಕಠಿಣ ಸ್ಪರ್ಧೆಯಾಗಿತ್ತು. ನನ್ನ ಎದುರಾಳಿ ನನಗಿಂತ ಎತ್ತರ ಹಾಗೂ ಬಲಿಷ್ಠವಾಗಿದ್ದರು. ರಾಷ್ಟ್ರೀಯ ಶಿಬಿರದಲ್ಲಿ ಫಿಟ್ನೆಸ್ ಪಡೆದಿರುವುದು ನನ್ನ ನೆರವಿಗೆ ಬಂತು. ನನ್ನ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪಂದ್ಯ ಜಯಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ’’ ಎಂದು ಲವ್ಲಿನಾ ಹೇಳಿದ್ದಾರೆ.

ಭಾಗ್ಯವತಿ ಜರ್ಮನಿಯ ಇರಿನಾ-ನಿಕೊಲೆಟ್ಟಾ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗ್ಯವತಿಗೆ ಇದು ಚೊಚ್ಚಲ ಜಯವಾಗಿದೆ.

ಮೇರಿಕೋಮ್, ಮನೀಶಾ ಭಾಗ್ಯವತಿ ಕ್ವಾರ್ಟರ್ ಫೈನಲ್‌ಗೆ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News