ಹಾಂಕಾಂಗ್ ಓಪನ್: ಒಕುಹರಾ ಚಾಂಪಿಯನ್

Update: 2018-11-18 18:16 GMT

ಹಾಂಕಾಂಗ್, ನ.18: ಜಪಾನ್‌ನ ನೊರೊಮಿ ಒಕುಹರಾ ಥಾಯ್ಲೆಂಡ್‌ನ ರಚನೊಕ್ ಇಂತನಾನ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಹಾಂಕಾಂಗ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಕಿರೀಟ ಧರಿಸಿದ್ದಾರೆ.

ಇಲ್ಲಿ ರವಿವಾರ 64 ನಿಮಿಷಗಳಲ್ಲಿ ಕೊನೆಗೊಂಡ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆರನೇ ರ್ಯಾಂಕಿನ ಒಕುಹರಾ ಮಾಜಿ ವಿಶ್ವ ಚಾಂಪಿಯನ್ ಇಂತನಾನ್‌ರನ್ನು 21-19, 24-22 ಗೇಮ್‌ಗಳ ಅಂತರದಿಂದ ಸೋಲಿಸಿದರು.

ಮುಂದಿನ ತಿಂಗಳು ಚೀನಾದಲ್ಲಿ ವಿಶ್ವ ಟೂರ್ ಫೈನಲ್ಸ್ ಪಂದ್ಯ ಆರಂಭವಾಗಲಿದ್ದು, ಆ ಟೂರ್ನಿಗೆ ಮೊದಲು ಒಕುಹರಾಗೆ ಇದು ಕೊನೆಯ ಪಂದ್ಯವಾಗಿದೆ. ಮಹಿಳೆಯರ ಡಬಲ್ಸ್‌ನಲ್ಲಿ ಅಗ್ರ ರ್ಯಾಂಕಿನ ಯೂಕಿ ಫುಕುಶಿಮಾ ಹಾಗೂ ಸಯಾಕಾ ಹಿರೊಟಾ ಕೊರಿಯಾದ ಲೀ ಸೊ-ಹೀ ಹಾಗೂ ಶಿನ್ ಸಿಯುಂಗ್ ಚಾನ್‌ರನ್ನು 21-18, 21-17 ಅಂತರದಿಂದ ಮಣಿಸಿದರು. ಜಪಾನ್ ಜೋಡಿ ಇದೀಗ ಲೀ ಹಾಗೂ ಶಿನ್ ವಿರುದ್ಧ ಎರಡನೇ ಬಾರಿ ಜಯ ಸಾಧಿಸಿದೆ. ಏಶ್ಯನ್ ಗೇಮ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಈ ಮೊದಲು ಗೆಲುವು ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News