ಭದ್ರತಾ ಭೀತಿ: ಲಾಹೋರ್‌ನ ಎಸಿಸಿ ಸಭೆಗೆ ಬಿಸಿಸಿಐ ಗೈರು

Update: 2018-11-18 18:17 GMT

ಕರಾಚಿ, ನ.18: ಭದ್ರತಾ ಭೀತಿ ಹಾಗೂ ಉಭಯ ದೇಶಗಳ ನಡುವಿನ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಬಿಸಿಸಿಐ ಲಾಹೋರ್‌ನಲ್ಲಿ ಶನಿವಾರ ನಡೆದ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಸಭೆಗೆ ತನ್ನ ಪ್ರತಿನಿಧಿಯನ್ನು ಕಳುಹಿಸಿಕೊಟ್ಟಿಲ್ಲ. ಬಿಸಿಸಿಐ, ಸಭೆಯಿಂದ ದೂರ ಉಳಿದಿದ್ದರೂ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಝ್ಮುಲ್ ಹಸನ್ ಅವರು 2020ರ ತನಕ ಎಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಹಸನ್ ಅವರು ಪಾಕ್‌ನ ಎಹ್ಸಾನ್ ಮಣಿ ಅವರಿಂದ ಅಧಿಕಾರ ಸ್ವೀಕರಿಸಿದರು. ‘‘ಬಾಂಗ್ಲಾ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನದಂತಹ ಪೂರ್ಣ ಸದಸ್ಯ ರಾಷ್ಟ್ರಗಳು ಸೇರಿದಂತೆ 33 ಎಸಿಸಿ ಮಾನ್ಯತೆ ಪಡೆದಿರುವ ದೇಶಗಳು ಸಭೆಯಲ್ಲಿ ಭಾಗವಹಿಸಿದ್ದವು. ಭಾರತ ಮಾತ್ರ ಸಭೆಗೆ ಹಾಜರಾಗದ ಪ್ರಮುಖ ದೇಶವಾಗಿತ್ತು. ಐಸಿಸಿ ಸಿಇಒ ಡೇವಿಡ್ ರಿಚರ್ಡ್ಸ್‌ಸನ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು’’ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News