ಸಹಾಯಕ ಸಾಲಿಸಿಟರ್ ಜನರಲ್ ಸಿ.ಶಶಿಕಾಂತ್ ಅವರಿಗೆ ಮಾತೃ ವಿಯೋಗ

Update: 2018-11-20 16:14 GMT

ಬೆಂಗಳೂರು, ನ.20: ರಾಜ್ಯ ಹೈಕೋರ್ಟ್‌ನ ಸಹಾಯಕ ಸಾಲಿಸಿಟರ್ ಜನರಲ್ ಸಿ.ಶಶಿಕಾಂತ್ ಅವರ ತಾಯಿ ಭವಾನಮ್ಮ (82) ಮಂಗಳವಾರ ಬೆಳಗ್ಗೆ 6.25ಕ್ಕೆ ಸಾಗರ ತಾಲೂಕಿನ ಚಿಪ್ಳಿ ಗ್ರಾಮದ ತಮ್ಮ ತೋಟದ ಮನೆಯಲ್ಲಿ ನಿಧನರಾದರು.

ಅವರಿಗೆ ವರ್ತಕರಾದ ಪತಿ ಚಿಪ್ಳಿ ಗೋಪಾಲ ಕಷ್ಣ ರಾವ್, ಸಿ.ಶಶಿಕಾಂತ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 1.30ಕ್ಕೆ ಚಿಪ್ಳಿ ಗ್ರಾಮದಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿಪ್ಳಿ ಗೋಪಾಲಕಷ್ಣ ರಾವ್ ಸಾಗರದ ಪ್ರಸಿದ್ಧ ಅಡಿಕೆ ವರ್ತಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News