ಆ್ಯಂಬಿಡೆಂಟ್ ಡೀಲ್ ಪ್ರಕರಣ: ರೆಡ್ಡಿ ಆಪ್ತ ಅಲಿಖಾನ್ ಗೆ ನ.27ರವರೆಗೆ ನ್ಯಾಯಾಂಗ ಬಂಧನ

Update: 2018-11-20 16:15 GMT

ಬೆಂಗಳೂರು, ನ.20: ಆ್ಯಂಬಿಡೆಂಟ್ ಡೀಲ್ ಪ್ರಕರಣದ ಆರೋಪಿ ಹಾಗೂ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ.

ಪ್ರಕರಣ ಕುರಿತ ವಿಚಾರಣೆ ನಡೆಸಿದ ಒಂದನೆ ಎಸಿಎಂಎಂ ಕೋರ್ಟ್ ನ.27ರವರೆಗೆ ಅಲಿಖಾನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದಕ್ಕೂ ಮುನ್ನ ಅಲಿಖಾನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು 61ನೆ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿತ್ತು. ಆ್ಯಂಬಿಡೆಂಟ್ ಪ್ರಕರಣದಲ್ಲಿ ಅಲಿಖಾನ್ ನಾಲ್ಕನೇ ಆರೋಪಿ. ಇಡಿ ಡೀಲ್ ಪ್ರಕರಣ ಹಾಗೂ 18 ಕೋಟಿ ರೂ.ಮೌಲ್ಯದ ಚಿನ್ನ ಪಡೆದ ಆರೋಪ ಈತನ ಮೇಲಿದೆ ಎನ್ನಲಾಗಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಅಲಿಖಾನ್ ಪರ ವಕೀಲ ಚಂದ್ರಶೇಖರ್ ಮತ್ತು ಸಿಸಿಬಿ ಪರ ಪಿಪಿ ಶೈಲಾಜಾ ನಾಯಕ್ ಅವರ ವಾದ ಪ್ರತಿವಾದ ಆಲಿಸಿ ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ಮಂಗಳವಾರ ಸಿಸಿಬಿಯ ವಾದ ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ಜಾಮೀನು ರದ್ದು ಮಾಡಿತ್ತು. ವಿಚಾರಣೆ ವೇಳೆ ಸಿಸಿಬಿ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಕೋರ್ಟ್‌ಗೆ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News