400 ಕೋಟಿ ವಕ್ಫ್ ಆಸ್ತಿ ಕಬಳಿಕೆ: ಕೆಎಸ್‌ಎಂಸಿಎಸ್‌ಪಿವಿಟಿ ಆರೋಪ

Update: 2018-11-20 16:17 GMT

ಬೆಂಗಳೂರು, ನ.20: 400 ಕೋಟಿಗೂ ಹೆಚ್ಚು ಬೆಲೆಬಾಳುವ ವಕ್ಫ್ ಆಸ್ತಿ ಕಬಳಿಕೆ ಆಗಿದ್ದು, ಕಬಳಿಕೆ ಆಗಿರುವ ವಕ್ಛ್ ಆಸ್ತಿಯನ್ನು ತೆರವುಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಸಮುದಾಯದ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎಂ.ಎಸ್.ರಿಯಾದ್ ಅಹ್ಮದ್, ಆಸ್ತಿ ಕಬಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಎಚ್.ಡಿ.ರೇವಣ್ಣರವರಿಗೆ ನೀಡಲಾಗಿದ್ದು, ಈ ಬಗ್ಗೆ ಗಮನಹರಿಸಿ ಕಬಳಿಕೆಯಾಗಿರುವ ವಕ್ಛ್ ಆಸ್ತಿಯನ್ನು ತೆರವುಗೊಳಿಸಿ ಸಂಸ್ಥೆಗೆ ಮರಳಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದರು.

ವೇದಿಕೆ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾಹಿತಿ ಅಧಿಕಾರಿಗಳನ್ನು ನೇಮಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಆಸ್ತಿಯ ಮಾಹಿತಿಯನ್ನು ಪಡೆದು ಅದರ ಬಗ್ಗೆ ಹೋರಾಟ ನಡೆಸುವುದಲ್ಲದೇ, ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳವನ್ನು ನಡೆಸಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News