ಕರ್ನಾಟಕ ಸಾಹಿತ್ಯ ಅಕಾಡೆಮಿ: ಪ್ರಕಟನೆಗಾಗಿ ಕೃತಿಗಳ ಆಹ್ವಾನ

Update: 2018-11-20 16:19 GMT

ಬೆಂಗಳೂರು, ನ.20: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಮುಕ್ತ ಪ್ರಕಟನಾ ಮಾಲಿಕೆ ಹೆಸರಿನಲ್ಲಿ ಕೃತಿಗಳನ್ನು ಪ್ರಕಟನೆಗಾಗಿ ಆಹ್ವಾನಿಸುತ್ತಿದೆ.

ಆಸಕ್ತ ಲೇಖಕರು ಯಾವುದೆ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ, ವಿಮರ್ಶೆ, ಅಧ್ಯಯನ, ವಿಚಾರ ಸಾಹಿತ್ಯದ ಕೃತಿಗಳು, ಪ್ರವಾಸ ಕಥನ, ಸಾಮಾಜಿಕ ಚಿಂತಕರ ವ್ಯಕ್ತಿನಿಷ್ಠ ಕೃತಿಗಳು ಅಥವಾ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಅನುವಾದಿತ ಕೃತಿಗಳನ್ನು ಪ್ರಕಟನೆಗೆ ಆಹ್ವಾನಿಸಬಹುದಾಗಿದೆ.

ಪ್ರಕಟನೆಗಾಗಿ ಕೃತಿಗಳನ್ನು ಡಿ.30ರೊಳಗೆ ಸಲ್ಲಿಸಬೇಕು. ಯಾವುದೆ ವಿಷಯಕ್ಕೆ ಸಂಬಂಧಿಸಿದ ಕೃತಿಯಾದರು ಅದು ಅಖಂಡ ಒಂದೇ ವಿಷಯ ವಸ್ತುವಿಗೆ ಸಂಬಂಧಿಸಿದ ಕೃತಿಗಳಾಗಿರಬೇಕು. ಕೃತಿಯು ನೂರು ಪುಟಗಳಿಂದ 150ಪುಟಗಳವರೆಗೆ ವ್ಯಾಪ್ತಿ ಇರಬಹುದು. ಆಸಕ್ತರು ಕನ್ನಡ ಭವನ, 2ನೆ ಮಹಡಿ, ಜೆಸಿ ರಸ್ತೆ, ಬೆಂಗಳೂರು-560002, ದೂ.22211730ಕ್ಕೆ ಸಂಪರ್ಕಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News