ವಸೀಂ ಜಾಫರ್ ರಣಜಿಯಲ್ಲಿ 11,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್

Update: 2018-11-21 12:14 GMT

ನಾಗ್ಪುರ, ನ.21: ವಿದರ್ಭ ತಂಡದ ಹಿರಿಯ ಕ್ರಿಕೆಟಿಗ ವಸೀಂ ಜಾಫರ್ ರಣಜಿ ಟ್ರೋಫಿಯಲ್ಲಿ 11,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬುಧವಾರ ಬರೋಡಾ ವಿರುದ್ಧದ ಮೂರನೇ ಸುತ್ತಿನ ರಣಜಿ ಟ್ರೋಫಿ ಪಂದ್ಯದಲ್ಲಿ ಈ ನೂತನ ಮೈಲುಗಲ್ಲು ಸ್ಥಾಪಿಸಿದರು.

ಭಾರತದ ಮಾಜಿ ಆರಂಭಿಕ ಆಟಗಾರ ಜಾಫರ್ ದೇಶೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಶ್ರೇಷ್ಠ ಪ್ರದರ್ಶನ ನೀಡಿದ್ದು, ನಾಯಕ ಫೈಝ್ ಫಝಲ್‌ರೊಂದಿಗೆ 2ನೇ ವಿಕೆಟ್‌ಗೆ 300 ರನ್ ಜೊತೆಯಾಟ ನಡೆಸಿದರು. ಜಾಫರ್ 97 ರನ್ ಗಳಿಸಿದ ತಕ್ಷಣ ರಣಜಿ ಟ್ರೋಫಿಯಲ್ಲಿ 11,000 ರನ್ ಪೂರೈಸಿದರು.

ಅಮೋಲ್ ಮುಝುಂದಾರ್ ದಾಖಲೆಯನ್ನು ಮುರಿದ ಜಾಫರ್ ಇದೀಗ ರಣಜಿ ಟ್ರೋಫಿ ಕ್ರಿಕೆಟ್‌ನ ಗರಿಷ್ಠ ರನ್ ಸ್ಕೋರರ್ ಎಂಬ ಹಿರಿಮೆಗೆ ಪಾತ್ರರಾದರು. ಟಾಸ್ ಜಯಿಸಿದ ವಿದರ್ಭ ನಾಯಕ ಫಝಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಫಝಲ್ ಹಾಗೂ ಜಾಫರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವಿದರ್ಭ ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News