ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: : ಮೇರಿ ಕೋಮ್ ಫೈನಲ್ ಗೆ

Update: 2018-11-22 12:08 GMT

ಹೊಸದಿಲ್ಲಿ, ನ.22: ಭಾರತದ ಬಾಕ್ಸಿಂಗ್ ದಂತಕತೆ ಮೇರಿ ಕೋಮ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಆರನೇ ಚಿನ್ನದ ಪದಕ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.

ಇಲ್ಲಿ ಗುರುವಾರ ನಡೆದ ಮಹಿಳೆಯರ 48 ಕೆಜಿ ವಿಭಾಗದ ಫೈನಲ್‌ನಲ್ಲಿ 35ರ ಹರೆಯದ, ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಉತ್ತರ ಕೊರಿಯಾದ ಕಿಮ್ ಹಿಯಾಂಗ್ ಮಿ ಅವರನ್ನು 5-0 ಅಂತರದಿಂದ ಮಣಿಸಿದರು.

ಮೇರಿಕೋಮ್ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಹನ್ನಾ ಒಕ್ಹೊಟಾರನ್ನು ಎದುರಿಸಲಿದ್ದಾರೆ. ಒಕ್ಹೊಟಾ ಮತ್ತೊಂದು ಸೆಮಿ ಫೈನಲ್‌ನಲ್ಲಿ ಜಪಾನ್‌ನ ಮಡೊಕಾ ವಾಡಾರನ್ನು ಸೋಲಿಸಿದ್ದರು.

ಮೇರಿ ಕೋಮ್ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಓರ್ವ ಯಶಸ್ವಿ ಬಾಕ್ಸರ್ ಆಗಿದ್ದು, ಈತನಕ 5 ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಜಯಿಸಿದ್ದಾರೆ. 2010ರಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯ ಬಾರಿ ಚಿನ್ನದ ಪದಕ ಜಯಿಸಿದ್ದರು. 48 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಆರು ಪದಕಗಳನ್ನು ಜಯಿಸಿರುವ ಮೇರಿ ಕೋಮ್ ಐರಿಶ್ ದಂತಕತೆ ಕಾಟಿ ಟೇಲರ್(5 ಚಿನ್ನ, 1 ಕಂಚು)ಅವರೊಂದಿಗೆ ಗರಿಷ್ಠ ಪದಕದ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಇದೀಗ ಫೈನಲ್‌ಗೆ ತಲುಪಿರುವ ಮಣಿಪುರದ ಬಾಕ್ಸರ್ ಮೇರಿ ವಿಶ್ವ ಚಾಪಿಯನ್‌ಶಿಪ್ ಇತಿಹಾಸದಲ್ಲಿ ಗರಿಷ್ಠ ಪದಕ ಜಯಿಸಿ ಐರ್ಲೆಂಡ್‌ನ ಟೇಲರ್ ದಾಖಲೆ ಮುರಿಯುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News