×
Ad

ಸಂಧಿವಾತಕ್ಕೆ ಸೂಕ್ತ ಚಿಕಿತ್ಸಾ ಘಟಕಗಳಿಲ್ಲ: ರುಮಟಾಲಜಿ ತಜ್ಞ ಡಾ.ದೆಬಾಸಿಸ್‌ದಂಡಾ

Update: 2018-11-22 22:14 IST

ಬೆಂಗಳೂರು, ನ.22: ಸಂಧಿವಾತ ಸಮಸ್ಯೆಗೆ ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸಾ ಘಟಕಗಳಿಲ್ಲ. ಸರಕಾರ ಈ ರೋಗದ ಔಷಧಿಗಳ ಬೆಲೆ ಕಡಿಮೆ ಮಾಡುವಂತೆ ಒತ್ತಡ ಹೇರಬೇಕು ಎಂದು ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದ ರಾಷ್ಟ್ರೀಯ ಆಧ್ಯಕ್ಷ ಡಾ.ದೆಬಾಸಿಸ್‌ದಂಡಾ ಒತ್ತಾಯಿಸಿದರು.

ನಗರದ ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘ ಮಿಲ್ಲರ್ಸ್ ರಸ್ತೆಯ ಎಪಿಐ ಭವನದಲ್ಲಿ ಏರ್ಪಡಿಸಿದ್ದ ಸಂದಿವಾತ ರೋಗದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವೆಬ್‌ಸೈಟ್ ಉದ್ಭಾಟಿಸಿ ಮಾತನಾಡಿದರು. ವೈದ್ಯರು ಮತ್ತು ರೋಗಿಗಳ ನಡುವೆ ಹೊಸ ಸಂಬಂಧ ಸೃಷ್ಟಿಸಲು ಸಂವಾದ ಕಾರ್ಯಕ್ರಮಗನ್ನು ಏರ್ಪಡಿಸಲಾಗುತ್ತಿದೆ.

ದೇಶದ ಶೇ.20ರಷ್ಟು ಜನರಿಗೆ ಸಂಧಿವಾತ ಸಮಸ್ಯೆ ಇದೆ. ಆದರೆ, ಅದಕ್ಕೆ ತಕ್ಕ ತಜ್ಞ ವೈದ್ಯರ ಕೊರತೆ ಇದೆ. ಇತ್ತೀಚಿನ ದಿನಗಳಲ್ಲಿ ರೋಗಿಗಳು ಮುತ್ತು ವೈದ್ಯರ ಸಂವಾದಗಳ ಮೂಲಕ ಈ ರೋಗ ನಿವಾರಣೆಗೆ ಪೂರಕ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಭಾರತೀಯರ ಪ್ರತಿಯೊಂದು ಆಹಾರವೂ ಆರೋಗ್ಯಕ್ಕೆ ಉತ್ತಮವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅದನ್ನು ಬಿಟ್ಟು ಆಧುನಿಕ ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಸಂಧಿವಾತ ರೋಗಿಗಳು ಹಾಗೂ ವೈದ್ಯರು ಸೇರಿ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಬೇಕೆಂದು ತಿಳಿಸಿದರು.

ಔಷಧಿ ತಯಾರಿಕೆ ಉತ್ಪಾದನಾ ವೆಚ್ಚ ಕಡಿಮೆ ಕಂಪೆನಿಗಳು ಇದ್ದರೂ, ಡ್ರಗ್ಸ್ ಕಂಪೆನಿಗಳು ಸರಕಾರಗಳನ್ನೇ ನಿಯಂತ್ರಣ ಮಾಡುವ ಶಕ್ತಿ ಹೊಂದಿವೆ. ಔಷಧಿಗಳ ಬೆಲೆ ಕಡಿಮೆ ಮಾಡಲು ರುಮಟಾಲಜಿ ತಜ್ಞ ವೈದ್ಯರ ಸಂಘ ಪ್ರಯತ್ನ ನಡೆಸಿದೆ ಎಂದರು.

ರಾಜ್ಯದಲ್ಲಿ ನಡೆದ ಮೊಟ್ಟಮೊದಲ ಸಂಧಿವಾತ ರೋಗಿಗಳ ಸಮಾವೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಪಾಲ್ಗೊಂಡು ವಿಚಾರ ವಿನಿಮಯ ಮಾಡಿಕೊಂಡರು. ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಜಂಟಿ-ಕಾರ್ಯದರ್ಶಿ ಡಾ.ನಾಗರಾಜ, ಹಿರಿಯ ಸಂಧಿವಾತ ತಜ್ಞ ಡಾ.ಮಹೇಂದ್ರನಾಥ್, ಡಾ.ಧರ್ಮಾನಂದ್, ಡಾ.ರಮೇಶ್‌ಜೊಯಿಸ್, ಚಂದ್ರಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News