ಪ್ರಿಯಕರನ ದೇಹದ ಅಡುಗೆಯನ್ನು ಮಹಿಳೆ ಕೆಲಸದವರಿಗೆ ಬಡಿಸಿಲ್ಲ: ಅಬುಧಾಬಿ ಪೊಲೀಸರ ಸ್ಪಷ್ಟನೆ

Update: 2018-11-23 17:06 GMT

ಅಬುಧಾಬಿ, ನ. 23: ಅಬುಧಾಬಿಯಲ್ಲಿ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರನನ್ನು ಕೊಂದು ಅಡುಗೆ ಮಾಡಿ ಕೆಲಸದವರಿಗೆ ಬಡಿಸಿದ್ದಾಳೆ ಎನ್ನಾಲಾದ ಪ್ರಕರಣಕ್ಕೆ ಸಂಬಂಧಿಸಿ ಅಬುಧಾಬಿ ಪೊಲೀಸರು ಸ್ಪಷ್ಟೀಕರಣವೊಂದನ್ನು ಹೊರಡಿಸಿದ್ದಾರೆ.

ಮಹಿಳೆಯು ತನ್ನ ಪ್ರಿಯಕರನ ದೇಹದ ಮಾಂಸದ ಅಡುಗೆಯನ್ನು ಕೆಲಸದವರಿಗೆ ಬಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಹಲವಾರು ಊಹಾಪೋಹಗಳನ್ನು ಸೃಷ್ಟಿಸಲಾಗಿದೆ ಹಾಗೂ ವಾಸ್ತವಿಕ ಘಟನೆಗಳೊಂದಿಗೆ ಕಲ್ಪನೆಯನ್ನು ಸೇರಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳ ಸುದ್ದಿ ಹರಡುವುದು ದೇಶದ ಭದ್ರತೆಯನ್ನು ಅಸ್ಥಿರಗೊಳಿಸುತ್ತದೆ ಹಾಗೂ ಅದು ಲಕ್ಷಾಂತರ ದಿರ್ಹಮ್ ನಷ್ಟ ಉಂಟು ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News