ಫೆಬ್ರವರಿಯಲ್ಲಿ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ

Update: 2018-11-24 17:09 GMT

ಬೆಂಗಳೂರು, ನ.24: ಬೆಂಗಳೂರು ಅಂತರ್‌ರಾಷ್ಟ್ರಿಯ ಚಲನಚಿತ್ರೋತ್ಸವವು 2019, ಫೆಬ್ರವರಿಯಲ್ಲಿ ನಡೆಸಲು ಉದ್ದೇಶಿಸಿದ್ದು, ಇದಕ್ಕಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಚಲನಚಿತ್ರೋತ್ಸವದ ಸಿದ್ಧತೆ ಕುರಿತು ಕೆಲವು ಸಭೆಗಳು ನಡೆದಿದ್ದು, ಇಲ್ಲಿ ಕೇಳಿ ಬಂದ ಸಲಹೆಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದರ ಜತೆಗೆ ಹಿರಿಯ ಕಲಾವಿದ, ನಿರ್ದೇಶಕ, ನಿರ್ಮಾಪಕರ ಸಲಹೆ ಪಡೆಯಲಾಗುತ್ತಿದೆ.

ಅತ್ಯುತ್ತಮ ಚಲನಚಿತ್ರಗಳ ಪಟ್ಟಿಯನ್ನು ಮಾಡಲಾಗುತ್ತಿದೆ. ಜತೆಗೆ, ಬೇರೆಯವರಿಂದಲೂ ಉತ್ತಮ ಚಿತ್ರಗಳ ವಿವರವನ್ನು ಪಡೆಯಲಾಗುತ್ತಿದೆ. ಎಲ್ಲವನ್ನು ಕ್ರೋಡೀಕರಿಸಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಬೆಂಗಳೂರು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News