ಆಟೋ ಚಾಲಕರು ಸಂಚಾರ ನಿಯಮ ಪಾಲಿಸಿ ಮಾದರಿಯಾಗಲಿ: ಶಾಸಕಿ ಸೌಮ್ಯಾ ರೆಡ್ಡಿ

Update: 2018-11-24 17:15 GMT

ಬೆಂಗಳೂರು, ನ.24: ನಗರದ ಆಟೋ ಚಾಲಕರು ಸುರಕ್ಷಿತ ಹಾಗೂ ಸಾರಿಗೆ ನಿಯಮಗಳನ್ನು ಪಾಲಿಸುವ ಮೂಲಕ ಇತರೆ ವಾಹನ ಚಾಲಕರಿಗೆ ಮಾದರಿಯಾಗಬೇಕೆಂದು ಶಾಸಕಿ ಸೌಮ್ಯಾ ರೆಡ್ಡಿ ತಿಳಿಸಿದರು.

ಶನಿವಾರ ಜಯನಗರದ ಬೈರಸಂದ್ರ ವಾರ್ಡ್‌ನಲ್ಲಿ ಆಟೋ ಚಾಲಕರಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಅವರು, ದೇಶದಲ್ಲಿಯೆ ಬೃಹತ್ ನಗರವಾಗಿರುವ ಬೆಂಗಳೂರಿನಲ್ಲಿ ಆಟೋ ಚಾಲಕರ ಸೇವೆ ಸ್ಮರಣೀಯವಾದದ್ದು. ಅವರಿಗೆ ಗೌರವ ಕೊಡುವುದು ನಾಗರಿಕರ ಕರ್ತವ್ಯವೆಂದು ತಿಳಿಸಿದರು. ಬಿಬಿಎಂಪಿ ಸದಸ್ಯ ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News