ಹಿರಿಯ ರಾಜಕೀಯ ಮುತ್ಸದ್ಧಿ ಜಾಫರ್ ಶರೀಫ್ ನಿಧನಕ್ಕೆ ಮಾಜಿ ಸಚಿವ ಡಾ.ಮಹದೇವಪ್ಪ ಸಂತಾಪ
Update: 2018-11-25 18:27 IST
ಬೆಂಗಳೂರು, ನ.25: ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಶರೀಫ್ ನಿಧನಕ್ಕೆ ಮಾಜಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಂತಾಪ ಸೂಚಿಸಿದ್ದಾರೆ.
ರೈಲ್ವೆ ಸಚಿವರಾಗಿ ಜಾಫರ್ ಶರೀಫ್ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ನಿಧನವು ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲು ಪ್ರಾರ್ಥಿಸುತ್ತೇನೆ ಎಂದು ಮಹಾದೇವಪ್ಪ ತಿಳಿಸಿದ್ದಾರೆ.