ಮೌಲಾನ ಆಝಾದ್ ರ ಪುಸ್ತಕ ಉರ್ದುಗೆ ಭಾಷಾಂತರಗೊಳಿಸಿದ್ದ ಜಾಫರ್ ಶರೀಫ್
Update: 2018-11-25 21:13 IST
ಬೆಂಗಳೂರು, ನ.25: ಮೌಲಾನ ಅಬುಲ್ ಕಲಾಂ ಆಝಾದ್ ಅವರ ‘ಇಂಡಿಯಾ ವಿನ್ಸ್ ಫ್ರೀಡಂ’ ಆಂಗ್ಲ ಭಾಷೆಯ ಕೃತಿಯನ್ನು ಇಂದು ನಿಧನ ಹೊಂದಿದ ಜಾಫರ್ ಶರೀಫ್ ಉರ್ದು ಭಾಷೆಗೆ ಭಾಷಾಂತರಗೊಳಿಸಿದ್ದರು.
ಇದೇ ನ.28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಆಹ್ವಾನವನ್ನು ನೀಡಿದ್ದರು ಎನ್ನಲಾಗಿದೆ.