ಜೆಸಿಬಿ ಢಿಕ್ಕಿ: ಬೈಕ್ ಸವಾರ ಸಾವು
ಬೆಂಗಳೂರು, ನ.25: ವೇಗವಾಗಿ ಹಿಂದಿನಿಂದ ಬಂದ ಜೆಸಿಬಿ ಢಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪೆನಿಯ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಇಲ್ಲಿ ಕೆಆರ್‌ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ನೆಲಮಂಗಲದ ಶ್ರೀನಿವಾಸ್(26) ಎಂಬುವರು ಮೃತಪಟ್ಟ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಆರ್‌ಪುರಂ ಬಳಿಯ ಭಾರತ್ ಟ್ರೇಡ್ ಕಂಪೆನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವೇಣುಗೋಪಾಲ್ ಅವರನ್ನು ಪಲ್ಸರ್ ಬೈಕ್‌ನಲ್ಲಿ ಕೂರಿಸಿಕೊಂಡು ಕೆಆರ್‌ಪುರಂ ಬಳಿಯ ರೈಲ್ವೆ ವಸತಿಗೃಹ ರಸ್ತೆಯಲ್ಲಿ ರಾತ್ರಿ 10ರ ವೇಳೆ ಹೋಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಹಿಂದಿನಿಂದ ಬಂದ ಜೆಸಿಬಿ ಢಿಕ್ಕಿ ಹೊಡೆದು ಕೆಳಗೆಬಿದ್ದ ಶ್ರೀನಿವಾಸ್ ಮೇಲೆ ಜೆಸಿಬಿ ಚಕ್ರ ಹರಿದು ಮೃತಪಟ್ಟರೆ, ವೇಣುಗೋಪಾಲ್ ಎಂಬುವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಕೆಆರ್‌ಪುರಂ ಸಂಚಾರ ಪೊಲೀಸರು ಜೆಸಿಬಿ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.